Advertisement

Asian Games; ಇದು ತಾನೆದುರಿಸಿದ ಅತ್ಯಂತ ಕಠಿಣ ಟೂರ್ನಿ: ಎಚ್.ಎಸ್ ಪ್ರಣಯ್

05:18 PM Oct 12, 2023 | Team Udayavani |

ಹೊಸದಿಲ್ಲಿ: ಹ್ಯಾಂಗ್‌ ಝೂ ಏಷ್ಯನ್ ಗೇಮ್ಸ್‌ ನಲ್ಲಿ ಪುರುಷರ ಸಿಂಗಲ್ಸ್ ಕಂಚಿನ ಪದಕ ಗೆದು ಇತಿಹಾಸ ನಿರ್ಮಿಸಿದ 31ರ ಹರೆಯದ ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್‌ಎಸ್ ಪ್ರಣಯ್ ಬೆನ್ನು ನೋವಿನ ನಡುವೆ ಪಂದ್ಯವಾಡಿದ್ದರು. ದೈಹಿಕ ಅಸ್ವಸ್ಥತೆಯ ಹೊರತಾಗಿಯೂ, ಅದ್ಭುತ ಪ್ರದರ್ಶನವನ್ನು ನೀಡಿದ ಅವರು 41 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಗೆದ್ದರು.

Advertisement

ಕಳೆದ 6-7 ವರ್ಷಗಳಲ್ಲಿ ತಾನು ಎದುರಿಸಿದ ಅತ್ಯಂತ ಕಠಿಣ ಟೂರ್ನಿ ಎಂದು ಪ್ರಣಯ್ ಬಣ್ಣಿಸಿದ್ದಾರೆ. ಕಾಲಿನ ಮೇಲೆ ಗುಳ್ಳೆಗಳು, ಕರುಳಿನ ಸಮಸ್ಯೆಗಳು ಮತ್ತು ಕೋವಿಡ್ -19 ರ ನಂತರದ ಪರಿಣಾಮಗಳೊಂದಿಗೆ ಅವರು ಹೋರಾಡಬೇಕಾಯಿತು. ಅವರ ಬೆನ್ನಿನ ಗಾಯವು ಅವರ ತರಬೇತಿಯನ್ನು ಸೀಮಿತಗೊಳಿಸಿತ್ತು.

ಇದನ್ನೂ ಓದಿ:Cinema: ಯಶ್‌,ರಾಮ್‌ಚರಣ್‌, ರಜಿನಿ ಸಿನಿಮಾದ ಗಳಿಕೆ ಮೀರಿಸಿದ ಕುಳ್ಳ ನಟ…ಯಾರೀತ?

ಪಂದ್ಯಾವಳಿಯ ಸಮಯದಲ್ಲಿ ಇಡೀ ಭಾರತೀಯ ತಂಡವು ಪ್ರತಿಕೂಲತೆಯನ್ನು ಎದುರಿಸಿತ್ತು. ಹಲವಾರು ಆಟಗಾರರು ಜ್ವರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಪ್ರಣಯ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next