Advertisement

Asian Games: ಸ್ಟಿಪಲ್ ಚೇಸ್, ಲಾಂಗ್ ಜಂಪ್, ರಿಲೇಯಲ್ಲಿ ಭಾರತೀಯ ವನಿತೆಯರ ಸಾಧನೆ

06:49 PM Oct 02, 2023 | Team Udayavani |

ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19 ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಸೋಮವಾರದ ಆಟದಲ್ಲಿ ಭಾರತೀಯ ವನಿತೆಯರು ಭಾರತಕ್ಕೆ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಸ್ಟೀಪಲ್ ಚೇಸ್, ಲಾಂಗ್ ಜಂಪ್ ಮತ್ತು ರಿಲೇಯಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದುಕೊಂಡಿದ್ದಾರೆ.

Advertisement

ಮಹಿಳೆಯರ 3000 ಮೀಟರ್ ಸ್ಟೀಪಲ್‌ ಚೇಸ್ ಸ್ಪರ್ಧೆಯಲ್ಲಿ ಭಾರತವು ಎರಡು ಪದಕಗಳನ್ನು ಗೆದ್ದುಕೊಂಡಿತು. ಪಾರುಲ್ ಚೌಧರಿ ಬೆಳ್ಳಿ ಮತ್ತು ಪ್ರೀತಿ ಕಂಚಿನ ಪದಕವನ್ನು ಗೆದ್ದು ಮೂರನೇ ಸ್ಥಾನಕ್ಕಾಗಿ ಹೋರಾಟದಲ್ಲಿ ರೋಚಕ ಸ್ಪರ್ಧೆ ನೀಡಿದರು. ಬಹ್ರೇನ್ ವಿಶ್ವ ಚಾಂಪಿಯನ್ ವಿನ್‌ ಫ್ರೆಡ್ ಯಾವಿ ಚಿನ್ನದ ಪದಕವನ್ನು ಗೆದ್ದು ಏಷ್ಯನ್ ಗೇಮ್ಸ್ ದಾಖಲೆಯನ್ನು ಸಹ ಮುರಿದರು.

ಲಾಂಗ್ ಜಂಪ್ ನಲ್ಲಿ ಬೆಳ್ಳಿ: ಭಾರತದ ಆ್ಯನ್ಸಿ ಸೋಜನ್ ಎಡಾಪಿಲ್ಲಿ ಅವರು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದುಕೊಂಡರು. ಅವರು ಚಿನ್ನ ಗೆದ್ದ ಚೀನಾದ ಶಿಕಿ ಕ್ಸಿಯಾಂಗ್‌ಗಿಂತ ಕೇವಲ 0.10 ಮೀಟರ್ ಹಿಂದೆ ಅಂದರೆ 6.63 ಮೀಟರ್‌ ಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದರು. ಹಾಂಗ್ ಕಾಂಗ್‌ನ ಯಾನ್ ಯು ಬೆಳ್ಳಿಯನ್ನು ಗೆದ್ದರು. ಭಾರತದ ಶೈಲಿ ಸಿಂಗ್ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಮಿಶ್ರ ರಿಲೇಯಲ್ಲಿ ಬೆಳ್ಳಿ: ಮಿಶ್ರ 4×400 ಮೀ ರಿಲೇ ಓಟದಲ್ಲಿ ಭಾರತದ ತಂಡವು ಬೆಳ್ಳಿ ಪದಕ ಗೆದ್ದುಕೊಂಡಿತು. ಮುಹಮ್ಮದ್ ಅಜ್ಮಲ್, ವಿತ್ಯಾ ರಾಮರಾಜ್, ರಾಜೇಶ್ ರಮೇಶ್ ಮತ್ತು ಶುಭಾ ವೆಂಕಟೇಶನ್ ಅವರಿದ್ದ ತಂಡವು ಓಟದಲ್ಲಿ ಮೂರನೇ ಸ್ಥಾನ ಪಡೆಯಿತು. ಆದರೆ ಎರಡನೇ ಸ್ಥಾನ ಪಡೆದ ಶ್ರೀಲಂಕಾ ತಂಡವು ಅನರ್ಹಗೊಂಡ ಕಾರಣ ಭಾರತ ತಂಡವನ್ನು ದ್ವಿತೀಯ ಸ್ಥಾನಿ ಎಂದು ಘೋಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next