ಹ್ಯಾಂಗ್ ಝೂ: ಇಲ್ಲಿನ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕುದುರೆ ಸವಾರಿ ತಂಡ ಇತಿಹಾಸ ಬರೆದಿದೆ. 41 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಭಾರತದ ಕುದುರೆ ಸವಾರಿ ತಂಡ (equestrian) ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಡ್ರೆಸ್ಸೇಜ್ ಟೀಮ್ ಈವೆಂಟ್ ನಲ್ಲಿ ಅನುಷ್ ಅಗರ್‌ವಾಲಾ, ಹೃದಯ ವಿಪುಲ್ ಛೇಡಾ, ದಿವ್ಯಾಕೃತಿ ಸಿಂಗ್, ಸುದೀಪ್ತಿ ಹಜೇಲಾ ಅವರನ್ನೊಳಗೊಂಡ ತಂಡವು ಮೊದಲ ಸ್ಥಾನ ಪಡೆದಿದೆ.
ಈ ಸಾಧನೆಯ ಬಗ್ಗೆ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಲವು ದಶಕಗಳ ನಂತರ ನಮ್ಮ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಹೃದಯ್ ಛೇಡಾ, ಅನುಷ್ ಅಗರ್‌ವಾಲಾ, ಸುದೀಪ್ತಿ ಹಜೇಲಾ ಮತ್ತು ದಿವ್ಯಕೃತ್ ಸಿಂಗ್ ಅವರು ಅಪ್ರತಿಮ ಕೌಶಲ್ಯ, ಟೀಮ್‌ವರ್ಕ್ ಅನ್ನು ಪ್ರದರ್ಶಿಸಿದ್ದಾರೆ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ರಾಷ್ಟ್ರಕ್ಕೆ ಗೌರವವನ್ನು ತಂದಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.