Advertisement

Asian Games Hockey: ಹಾಲಿ ಚಾಂಪಿಯನ್‌ ಜಪಾನ್‌ ವಿರುದ್ಧ ಭಾರತಕ್ಕೆ ಗೆಲುವು

11:03 PM Sep 28, 2023 | Team Udayavani |

ಹ್ಯಾಂಗ್‌ಝೂ: ಯುವ ಸ್ಟ್ರೈಕರ್‌ ಅಭಿಷೇಕ್‌ ಅವರ ಅವಳಿ ಗೋಲುಗಳ ಸಾಹಸದಿಂದ ಭಾರತೀಯ ತಂಡವು ಗೇಮ್ಸ್‌ನ ಹಾಕಿ ಸ್ಫರ್ಧೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜಪಾನ್‌ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಇದು ತಂಡದ ಸತತ ಮೂರನೇ ಗೆಲುವು ಆಗಿದ್ದು ಸೆಮಿಫೈನಲಿಗೇರುವ ಆಸೆಯನ್ನು ಗಟ್ಟಿಗೊಳಿಸಿದೆ.

Advertisement

ಅಭಿಷೇಕ್‌ ಅವರು ಪಂದ್ಯದ 13 ಮತ್ತು 48ನೇ ನಿಮಿಷದಲ್ಲಿ ಅಮೋಘ ಗೋಲನ್ನು ಹೊಡೆ ದರು. 24ನೇ ನಿಮಿಷದಲ್ಲಿ ಮನ್‌ದೀಪ್‌ ಸಿಂಗ್‌ ಮತ್ತು 34ನೇ ನಿಮಿಷದಲ್ಲಿ ಅಮಿತ್‌ ರೋಹಿದಾಸ್‌ ಗೋಲನ್ನು ಹೊಡೆದು ಭಾರತದ ದೊಡ್ಡ ಗೆಲುವಿಗೆ ಕಾರಣರಾದರು. ಪಂದ್ಯದ ಕೊನೆ ಐದು ನಿಮಷಗಳಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ಜಪಾನ್‌ ಮೂರು ನಿಮಿಷಗಳ ಅಂತರದಲ್ಲಿ ಎರಡು ಗೋಲು ಹೊಡೆಯಿತು. ಈ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಲು ಯಶಸ್ವಿಯಾಯಿತು. ಭಾರತ ಶನಿವಾರ ನಡೆಯವ “ಎ’ ಬಣದ ಪಂದ್ಯದಲ್ಲಿ ಪಾಕಿಸ್ಥಾನ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next