Advertisement

Asian Games; ನಿಖತ್‌ ಗೆಲುವಿನೊಂದಿಗೆ ಬಾಕ್ಸಿಂಗ್‌ ಶುಭಾರಂಭ

11:24 PM Sep 24, 2023 | Team Udayavani |

ಹ್ಯಾಂಗ್‌ಝೂ: ಭಾರತದ ಅಗ್ರ ಬಾಕ್ಸರ್‌ ನಿಖತ್‌ ಜರೀನ್‌ ವಿಯೆಟ್ನಾಂನ ಥಿ ಟಾಮ್‌ ಎನ್‌ಗುಯೆನ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಬಾಕ್ಸಿಂಗ್‌ ಸ್ಫರ್ಧೆಯಲ್ಲಿ ಶುಭಾರಂಭಗೈದು ಪ್ರಿ-ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದರು. ಇದೇ ವೇಳೆ 54 ಕೆ.ಜಿ. ವಿಭಾಗದಲ್ಲಿ ಪ್ರೀತಿ ಪವಾರ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಎರಡು ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಜರೀನ್‌ ಎರಡು ಬಾರಿಯ ಏಷ್ಯನ್‌ ಚಾಂಪಿಯನ್‌ ಆಗಿರುವ ಎನ್‌ಗುಯೆನ್‌ ಅವರನ್ನು ಸುಲಭವಾಗಿ ಮಣಿಸಿದರು. ಇದು ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನ ಪುನರಾವರ್ತಿತ ಹೋರಾಟವಾಗಿತ್ತು.

ಅಂತಿಮ 16ರ ಸುತ್ತಿನಲ್ಲಿ ಜರೀನ್‌ ದಕ್ಷಿಣ ಕೊರಿಯದ ಚೊರೋಂಗ್‌ ಬ್ಯಾಕ್‌ ಅವರ ಸವಾಲನ್ನು ಎದುರಿಸಲಿದ್ದರೆ ಪ್ರೀತಿ ಅವರಿಗೆ ಮುಂದಿನ ಸುತ್ತಿನಲ್ಲಿ ಕಠಿನ ಎದುರಾಳಿ ಸಿಕ್ಕಿದ್ದಾರೆ.ಅವರು ಮೂರು ಬಾರಿ ವಿಶ್ವ ಪದಕ ವಿಜೇತೆ ಝೈನಾ ಶೇಖರ್‌ಬೆಕೋವಾ ಅವರ ಸವಾಲನ್ನು ಎದುರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next