Advertisement
ಶುಕ್ರವಾರ ಮಲೇಶ್ಯ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ವಿಶೇಷವೆಂದರೆ, ವಿಶ್ವದ 16ನೇ ರ್‍ಯಾಂಕಿಂಗ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ 8 ಬಾರಿಯ ವಿಶ್ವ ಚಾಂಪಿಯನ್ ನಿಕೋಲ್ ಡೇವಿಡ್ ಅವರಿಗೆ ಸೋಲುಣಿಸಿದ್ದು. ಹಾಂಕಾಂಗ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಆ್ಯನಿ ಯು ವಿರುದ್ಧ ಆಘಾತಕಾರಿ ಸೋಲುಂಡಿದ್ದ ಜೋಶ್ನಾ, ಶುಕ್ರವಾರದ ದೊಡ್ಡ ಬೇಟೆಯೊಂದಿಗೆ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರು. ಹಾಂಕಾಂಗ್ ಎದುರಿನ ಪಂದ್ಯವನ್ನು ಭಾರತ 1-2ರಿಂದ ಕಳೆದುಕೊಂಡಿತ್ತು. ಹೀಗಾಗಿ ಗ್ರೂಪ್ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿ ಬಲಾಡ್ಯ ಮಲೇಶ್ಯ ವಿರುದ್ಧ ಆಡುವ ಅವಕಾಶ ಪಡೆದಿತ್ತು.
Related Articles
ಭಾರತ ಶನಿವಾರದ ಫೈನಲ್‌ನಲ್ಲಿ ಮತ್ತೆ ಹಾಂಕಾಂಗ್ ವಿರುದ್ಧ ಆಡಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅದು ಜಪಾನ್ ವಿರುದ್ಧ 2-0 ಜಯ ಸಾಧಿಸಿತು.
Advertisement
“ಹಾಂಕಾಂಗ್ ಮಲೇಶ್ಯದಷ್ಟೇ ಕಠಿನ ಎದುರಾಳಿ. ಅದು ಬಲಿಷ್ಠ ಆಟಗಾರರನ್ನು ಹೊಂದಿದೆ. ಸೋಲಿಸುವುದು ಬಹಳ ಕಷ್ಟ. ಆದರೆ ನಾವು ತುಂಬು ಆತ್ಮವಿಶ್ವಾಸದಲ್ಲಿದ್ದೇವೆ’ ಎಂದಿದ್ದಾರೆ ದೀಪಿಕಾ. ಭಾರತ ಕಳೆದ ಏಶ್ಯಾಡ್‌ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಇದು ವನಿತಾ ಸ್ಕ್ವಾಷ್ ತಂಡದ ಅತ್ಯುತ್ತಮ ಸಾಧನೆಯಾಗಿದೆ.
ಪುರುಷರಿಗೆ ಕಂಚಿನ ಪದಕಕಳೆದ ಬಾರಿಯ ಚಾಂಪಿಯನ್ ಆಗಿರುವ ಭಾರತದ ಪುರುಷರ ಸ್ಕ್ವಾಷ್ ತಂಡ ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಶುಕ್ರವಾರದ ಸೆಮಿಫೈನಲ್‌ನಲ್ಲಿ ಹಾಂಕಾಂಗ್ ವಿರುದ್ಧ ಭಾರತ 0-2 ಅಂತರದ ಸೋಲನುಭವಿಸಿ ತೃತೀಯ ಸ್ಥಾನಿಯಾಯಿತು. ಭಾರತ ತಂಡ ಸೌರವ್ ಘೋಷಾಲ್, ಹರೀಂದರ್ ಪಾಲ್ ಸಿಂಗ್ ಸಂಧು, ರಮಿತ್ ಟಂಡನ್ ಮತ್ತು ಮಹೇಶ್ ಮಂಗಾಂವ್ಕರ್ ಅವರನ್ನೊಳಗೊಂಡಿತ್ತು. ಸೆಮಿಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಘೋಷಾಲ್ ಮತ್ತು ಸಂಧು ಸೋಲನುಭವಿಸಿದರು. ವೀ ವೆರ್ನ್ ಓರ್ವ ಅಗ್ರಮಾನ್ಯ ಆಟಗಾರ್ತಿ. ಹೀಗಾಗಿ ನನ್ನ ಸಾಮರ್ಥ್ಯವನ್ನೆಲ್ಲ ಪಣಕ್ಕಿಡ ಬೇಕಿತ್ತು. ಇದರಲ್ಲಿ ನಾನು ಯಶಸ್ವಿಯಾದೆ.
ದೀಪಿಕಾ ಪಳ್ಳಿಕಲ್