Advertisement

Asian ಫುಟ್‌ಬಾಲ್‌: ಭಾರತಕ್ಕೆ ಸೋಲು

11:29 PM Jan 13, 2024 | Team Udayavani |

ಅಲ್‌ ರಯಾನ್‌ (ಕತಾರ್‌): ನಿರೀಕ್ಷೆಯಂತೆ ಏಷ್ಯನ್‌ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಸೋಲನುಭವಿಸಿದೆ. ಶನಿವಾರ ನಡೆದ “ಬಿ’ ವಿಭಾಗದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ 2-0 ಅಂತರದ ಗೆಲುವು ಸಾಧಿಸಿತು.

Advertisement

ಆದರೆ ಆಸೀಸ್‌ ಗೆಲುವು ನಿರೀಕ್ಷಿಸಿದಷ್ಟು ಸುಲಭದಲ್ಲಿ ಒಲಿಯಲಿಲ್ಲ. ಪಂದ್ಯದ 50ನೇ ನಿಮಿಷದ ತನಕ ಭಾರತ ತೀವ್ರ ಪೈಪೋಟಿ ನೀಡುತ್ತ ಸಾಗಿತು. ಆಗ ಜಾಕ್ಸನ್‌ ಇರ್ವಿನ್‌ ಮೊದಲ ಗೋಲು ಸಿಡಿಸಿದರು. 73ನೇ ನಿಮಿಷದಲ್ಲಿ ಜೋರ್ಡನ್‌ ಬ್ರಾಸ್‌ ಆಸೀಸ್‌ ಪರ ದ್ವಿತೀಯ ಗೋಲು ಹೊಡೆದರು.ಜ. 18ರ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ ಉಜ್ಬೆಕಿಸ್ಥಾನದ ವಿರುದ್ಧ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next