Advertisement

ಏಷ್ಯಾದ ಹಸಿರು ಕೋಗಿಲೆ

12:38 PM May 19, 2018 | |

ಕೋಗಿಲೆ ಕುಟುಂಬದಲ್ಲೆ ‘ಕ್ಯುಕುಲಿಫಾರ್ಮ್ಸ್‌’Asian emerald cuckoo (Chrysococcyx maculatus) ಅನ್ನೋ ಉಪ ಕುಟುಂಬವಿದೆ. ಐರೋಪ್ಯ ದೇಶದಲ್ಲಿರುವ ಕೋಗಿಲೆಯಂಥ ಹಕ್ಕಿಯನ್ನು ಈ ಕುಟುಂಬಕ್ಕೆ ಸೇರಿಸಲಾಗಿದೆ. ಕೋಗಿಲೆ, ರೋಡ್‌ರನ್ನರ್‌,  ಮಲ್ಕೋವಾಸ್‌, ಕೋವಾಸ್‌, ಕೊಕೊಲ್‌ಸಮಸ್‌ ಮತ್ತು ಅನಿಸ್‌ ಎಂಬ ಪ್ರಬೇಧದ ಉಪ ಜಾತಿಯಲ್ಲಿವೆ.

Advertisement

ಪಾಚಿ ಹಸಿರು ಬಣ್ಣದ ಹಕ್ಕಿಗಳು ಏಷಿಯಾ ಖಂಡದ ವಿವಿಧ ಪ್ರದೇಶಗಳಲ್ಲಿ ಇವೆ. ಇದು ಸುಮಾರು 18 ಸೆಂ.ಮೀ ಉದ್ದವಿದ್ದು, ಗಂಡು ಹಕ್ಕಿಯ ತಲೆ, ರೆಕ್ಕೆ, ಪಾಚಿ ಹಸಿರು ಬಣ್ಣದಿಂದ ಕೂಡಿದೆ. ಎದೆ, ಹೊಟ್ಟೆಯ ಮೇಲ್ಭಾಗದಲ್ಲಿ ಬಿಳಿ ಬಣ್ಣದಿಂದ ಕೂಡಿದ ಹಸಿರು ಗೆರೆಗಳಿವೆ

 ಎದೆಯ ಕೆಳ ಭಾಗ, ಬಾಲದ ಅಡಿ ರೆಕ್ಕೆಯಭಾಗದಲ್ಲೂ ಸಹ ಬಿಳಿ ಬಣ್ಣದ ಚಿತ್ತಾರ ಇದೆ. ರೆಕ್ಕೆಯ ಮೇಲಾºಗ ಪಾಚಿ ಹಸಿರಿನಿಂದ ಕೂಡಿದೆ. ಇದು ಕಾಡು ಪಾರಿವಾಳದ ರೆಕ್ಕೆಯ ಬಣ್ಣವನ್ನೇ ಹೋಲುತ್ತದೆ. ಕಣ್ಣಿನ ಸುತ್ತ ಕೇಸರಿ ಬಣ್ಣದ ವರ್ತುಲಾಕಾರವಿದೆ. ಚುಂಚು ಮೇಲ್ಭಾಗದಲ್ಲಿ ಕೇಸರಿ ಮತ್ತು ಕೆಳಕ್ಕೆ ಬಂದಂತೆ ಹಳದಿ ಬಣ್ಣ ಇದ್ದು -ತುದಿಯಲ್ಲಿ ಕಪ್ಪು ಬಣ್ಣವಿದೆ. ಪ್ರಬುದ್ಧಾವಸ್ಥೆ ತಲುಪಿದ ಹೆಣ್ಣು ಹಕ್ಕಿಯ ತಲೆಯ ಮೇಲ್ಭಾಗ ತಾಮ್ರ ಮಿಶ್ರಿತ ಹಸಿರು ಬಣ್ಣದಿಂದ ಕೂಡಿದೆ. ಮಣ್ಣು ಕೆಂಪು ಬಣ್ಣದ ನೆತ್ತಿ ಮತ್ತು ತಲೆ ಇದ್ದು- ಕೆಳ ಭಾಗದಲ್ಲಿ ಹಸಿರಿನ ಗೆರೆ ಇರುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಯ ರೆಕ್ಕೆಯ ಅಡಿಯಲ್ಲಿರುವ ಹಸಿರು ಬಣ್ಣದ ಗೆರೆ-ಈ ಹಕ್ಕಿಗಳು ಹಾರುವಾಗ ಎದ್ದು ಕಾಣುತ್ತದೆ. ಪ್ರಬುದ್ಧಾವಸ್ಥೆ ತಲುಪಿದ ಗಂಡು ಹಕ್ಕಿಯ, ಎದೆಯ ಕೆಳ ಭಾಗ, ಹೊಟ್ಟೆ ಮತ್ತು ಬಾಲದ ಅಡಿಯಲ್ಲಿ ದಪ್ಪ ಮತ್ತು ಅಗಲವಾದ ಹಸಿರು ಬಣ್ಣದ ಗೆರೆ ದಟ್ಟವಾಗಿರುತ್ತದೆ.  ಹೆಣ್ಣು ಹಕ್ಕಿಯಲ್ಲಿರುವ ಈ ಗೆರೆಗಳೂ ಸ್ವಲ್ಪ ಸಪೂರವಾಗಿರುವುದರಿಂದ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. 

ಕೋಗಿಲೆಗಳಿಗೆ ಪರಪುಟ್ಟ ಎಂಬ ಹೆಸರು ಇದೆ. ಇದು ತಾನೇ ಗೂಡನ್ನು ನಿರ್ಮಿಸಿ ತನ್ನ ಮೊಟ್ಟೆ ಇಡುವುದಿಲ್ಲ. ಬೇರೆ ಹಕ್ಕಿಗಳ ಗೂಡನ್ನು ತನ್ನ ಮೊಟ್ಟೆ ಇರಿಸಲು ಉಪಯೋಗಿಸುತ್ತದೆ.  ಹೀಗೆ ಮೊಟ್ಟೆ ಇಟ್ಟಾಗ ಕೆಲವೊಂದು ತಳಿಯ ಕೋಗಿಲೆಗಳು ಅದರಲ್ಲಿರುವ ತನ್ನ ಮೊಟ್ಟೆ ಕಾವು ಕೊಟ್ಟು ಸಾಕುವ ಹಕ್ಕಿ ಮೊಟ್ಟೆಯನ್ನು ಗೂಡಿನಿಂದ ಹೊರಗೆ ಎಸೆದು- ಆ ಜಾಗದಲ್ಲಿ ತನ್ನ ಮೊಟ್ಟೆ ಇಡುತ್ತದೆ.   ಇಲ್ಲವೇ ಗೊತ್ತಿದ್ದರೂ ಸಹ ಕೋಗಿಲೆಗಳ ಮೊಟ್ಟೆಯನ್ನು ಮರಿಮಾಡುವ ಹಕ್ಕಿಗೆ ಏನು ಪ್ರಯೋಜನ? ಬೇರೆ ಹಕ್ಕಿಯ ಮೊಟ್ಟೆಯಾದರೂ ತನ್ನ ಮೊಟ್ಟೆಯಂತೆಯೇ, ಕೆಲವೊಮ್ಮೆ ಈ ಪರಪುಟ್ಟ ಹಕ್ಕಿಯ ಮರಿ ದೊಡ್ಡದಿರುವುದೂ ಸಹ ಇದೆ. ಆ ಮರಿಯ ಬಣ್ಣ ಸಹ ತನ್ನ ಮರಿಯ ಬಣ್ಣಕ್ಕಿಂತ ಬೇರೆ ಇರುವುದೂ ಇದೆ.  ಆದರೂ ಆ ಮರಿಗಳನ್ನು ಸಲಹುವುದೇಕೆ? ಎನ್ನುವುದರ ಕಾರಣ ತಿಳಿಯಬೇಕಿದೆ.

Advertisement

ಕೋಗಿಲೆಯ ಮರಿಗಳು ತುಂಬಾ ಚುರುಕು. ಮಲತಾಯಿ ಗುಟುಕು ನೀಡುವಾಗ ಬೇಗ ತನ್ನ ಆಹಾರ ತೆಗೆದುಕೊಳ್ಳುತ್ತವೆ. ಇದರಿಂದ ಈ ಕೋಗಿಲೆ ಮರಿಗಳ ಮರಿಗಳ ಬೆಳವಣಿಗೆ ವೇಗವಾಗಿ ಆಗುತ್ತದೆ.  ಮಲತಾಯಿ ಈ ಕಾರಣದಿಂದ, ಹಕ್ಕಿ ಗೂಡಲ್ಲಿ ಮೊಟ್ಟೆ ಇಟ್ಟ ಸಮಯ ಆದರಿಸಿ -ತಾನು ಅದರ ಕಣ್ಣು ತಪ್ಪಿಸಿ -ತನ್ನ ಮೊಟ್ಟೆಯನ್ನು ಅದರ ಗೂಡಲ್ಲಿ ಸೇರಿಸುವುದೋ? ಮಲತಾಯಿ ಹಕ್ಕಿಯೇ ಮೊಟ್ಟೆ ಇಡುವುದರ ಪೂರ್ವದಲ್ಲೇ ತನ್ನ ಮೊಟ್ಟೆ ಅದರಲ್ಲಿ ಇಡುವುದೋ? ಎಂಬುದು ಅಧ್ಯಯನದಿಂದ ತಿಳಿಯಬೇಕಾದ ಕುತೂಹಲಕಾರಿ ವಿಷಯ. 

ಈ ಹಕ್ಕಿಯ ಗಾತ್ರ ಬಣ್ಣವನ್ನು ಗಮನಿಸಿದರೆ -ಕೋಗಿಲೆಗಳ ಬಣ್ಣ ಗಾತ್ರ ಬೇರೆಯೇ ಆಗಿರುತ್ತದೆ.  ಕೆಲವು ಪ್ರಬೇಧದ ಕೋಗಿಲೆಗಳು ತಾವೇ ಗೂಡು ಕಟ್ಟಿ ,ಮೊಟ್ಟೆ ಇಟ್ಟು ,ಮರಿಮಾಡುತ್ತವೆ. ಕೆಲವು ಕೋಗಿಲೆಗಳು ಗೂಡು ಕಟ್ಟುವುದಿಲ್ಲ. ಇನ್ನು ಕೆಲವು ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡುತ್ತವೆ.  ಇದಕ್ಕೆ ಕಾರಣ ಏನು ? ಎಂಬುದನ್ನು ತಿಳಿಯಬೇಕಿದೆ. ಏಷ್ಯಾದ ಪಾಚಿ ಹಸಿರಿನ ಕೋಗಿಲೆ, ಬಾಂಗ್ಲಾದೇಶ, ಭೂತಾನ್‌, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷಿಯಾ, ಲುಮಿಸ್‌, ಮಲೇಷಿಯಾ. ಮೈನಾವರ, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್‌ಗಳಲ್ಲೂ ಈ ಪ್ರಬೇಧದ ಹಕ್ಕಿಗಳಿವೆ. ಇವು ಸಾಮಾನ್ಯವಾಗಿ ಉಷ್ಣ  ವಲಯದ ಕಾಡು, ಸಮಶೀತೋಷ್ಣ ವಲಯದ ಬೆಟ್ಟದ ಪ್ರದೇಶ, ಬೆಟ್ಟದ ತಪ್ಪಲಿನಲ್ಲಿರುವ ಮರಗಳ ಜಾಗವನ್ನು ತನ್ನ ಇರುನೆಲೆಯಾಗಿ ಮಾಡಿಕೊಳ್ಳುತ್ತವೆ.  

ವರ್ಷ ಪೂರ್ತಿ ಇಂತಹ ಇರುನೆಲೆಯಲ್ಲಿಯೇ ಇರುವುದೋ ಅಥವಾ ಮರಿಮಾಡುವ ಸಮಯದಲ್ಲಿ ಮಾತ್ರ ಮಲತಾಯಿ ಹಕ್ಕಿಗಳಿರುವ ಸ್ಥಳದಲ್ಲಿ ಇದ್ದು -ತನ್ನ ಮರಿ ದೊಡ್ಡದಾಗಿ ಹಾರಲು ಆರಂಭಿಸಿದ ನಂತರ ಜಾಗ ಖಾಲಿ ಮಾಡುವುದೋ ಎಂಬುದು ತಿಳಿಯದ ವಿಷಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next