Advertisement

ಚೀನ ವಿರುದ್ಧ ಭಾರತ ಸರಣಿ

06:00 AM Jul 21, 2018 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಏಶ್ಯನ್‌ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಗಾಗಿ ಭಾರತ ತಂಡ ಚೀನ ವಿರುದ್ಧ ಅವರದೇ ನೆಲದಲ್ಲಿ “ಇಂಟರ್‌ನ್ಯಾಶನಲ್‌ ಫ್ರೆಂಡ್ಲಿ’ ಸರಣಿಯೊಂದನ್ನು ಆಡಲಿದೆ ಎಂದು ಅಖೀಲ ಭಾರತ ಫ‌ುಟ್‌ಬಾಲ್‌ ಫೆಡರೇಶನ್‌ (ಎಐಎಫ್ಎಫ್) ತಿಳಿಸಿದೆ.

Advertisement

ಫಿಫಾ ಕಣ್ಗಾವಲಿನಲ್ಲಿ ಅಕ್ಟೋಬರ್‌ 8ರಿಂದ 16ರ ತನಕ ಬೀಜಿಂಗ್‌ನಲ್ಲಿ ಈ ಸರಣಿ ನಡೆಯಲಿದೆ. 97ನೇ ರ್‍ಯಾಂಕಿಂಗ್‌ನ ಭಾರತ ಹಾಗೂ 75ನೇ ರ್‍ಯಾಂಕಿಂಗ್‌ನ ಚೀನ ನಡುವಿನ ಈ ಸರಣಿಯ ಪಂದ್ಯಗಳ ಸಂಖ್ಯೆ ಹಾಗೂ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎಐಎಫ್ಎಫ್ ತನ್ನ ತಿಳಿಸಿದೆ.

ಭಾರತ-ಚೀನ ಈವರೆಗೆ 17 ಸಲ ಮುಖಾಮುಖೀಯಾಗಿದ್ದು, ಈ ಪಂದ್ಯಗಳನ್ನೆಲ್ಲ ಭಾರತದ ನೆಲದಲ್ಲೇ ಆಡಲಾಗಿತ್ತು. ಕೊನೆಯ ಪಂದ್ಯ ನಡೆದದ್ದು 21 ವರ್ಷಗಳ ಹಿಂದೆ, ಕೊಚ್ಚಿಯಲ್ಲಿ. ಅದು 1997ರ ನೆಹರೂ ಕಪ್‌ ಪಂದ್ಯಾವಳಿಯಾಗಿತ್ತು. ಈ 17 ಪಂದ್ಯಗಳಲ್ಲಿ ಭಾರತ ಒಂದನ್ನೂ ಗೆದ್ದಿಲ್ಲ. ಚೀನರಲ್ಲಿ 12 ಜಯ ಸಾಧಿಸಿದೆ. ಉಳಿದ 5 ಪಂದ್ಯಗಳು ಡ್ರಾಗೊಂಡಿವೆ. ಇತ್ತೀಚೆಗೆ ಭಾರತದ ಆಂಡರ್‌-16 ತಂಡ ಚೀನಕ್ಕೆ ತೆರಳಿ ಚತುಷ್ಕೊಣ ಸರಣಿಯನ್ನು ಆಡಿತ್ತು. 

ಐತಿಹಾಸಿಕ ಪ್ರವಾಸ
“ಚೀನ ಪ್ರವಾಸ ಎನ್ನುವುದು ಭಾರತದ ಪಾಲಿಗೆ ನಿಜಕ್ಕೂ ಐತಿಹಾಸಿಕ. ಚೀನ ಮತ್ತು ಭಾರತದ ಫ‌ುಟ್‌ಬಾಲ್‌ ವಿಶ್ವ ಮಟ್ಟದಲ್ಲೀಗ ತ್ವರಿತ ಗತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಚೈನೀಸ್‌ ಫ‌ುಟ್‌ಬಾಲ್‌ ಅಸೋಸಿಯೇಶನ್‌ ಜತೆ ಕಳೆದೊಂದು ತಿಂಗಳಿಂದ ನಾವು ನಡೆಸುತ್ತ ಬಂದ ಮಾತುಕತೆ ಯಶಸ್ವಿಯಾ ಗಿದೆ. ನಮ್ಮ ಮಾರುಕಟ್ಟೆ ಪಾಲುದಾರ ಎಫ್ಎಸ್‌ಡಿಎಲ್‌ಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳು…’ ಎಂಬುದಾಗಿ ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next