Advertisement

Asia Cup 2023; ‘ಈ ಆಟಗಾರ ಅದೃಷ್ಟದಿಂದಲೇ ತಂಡದಲ್ಲಿರುವುದು..’: ಟಾಮ್ ಮೂಡಿ ಅಭಿಪ್ರಾಯ

01:04 PM Aug 22, 2023 | Team Udayavani |

ಹೊಸದಿಲ್ಲಿ: ಮುಂಬರುವ ಏಷ್ಯಾಕಪ್ ಕೂಟಕ್ಕೆ ಬಿಸಿಸಿಐ ಸೋಮವಾರ ಭಾರತ ತಂಡವನ್ನು ಪ್ರಕಟಿಸಿದೆ. ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಪತ್ರಿಕಾಗೋಷ್ಠಿ ನಡೆಸಿ 17 ಮಂದಿ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಐಪಿಎಲ್ ಕೋಚಿಂಗ್ ಮಾಡಿ ಅನುಭವವಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ ಅವರು ತಂಡದ ಬಗ್ಗೆ ಮಾತನಾಡಿದ್ದು, ಸೂರ್ಯಕುಮಾರ್ ಅವರು ಸ್ಥಾನ ಪಡೆದಿರುವುದಕ್ಕೆ ಅದೃಷ್ಟವಂತರು ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

“ಆ ತಂಡದಲ್ಲಿರಲು ನಾನು ಅದೃಷ್ಟಶಾಲಿ ಎಂದು ಭಾವಿಸುವ ಆಟಗಾರನೆಂದರೆ ಸೂರ್ಯಕುಮಾರ್ ಯಾದವ್. ಅವರು ನಾವೆಲ್ಲರೂ ವೀಕ್ಷಿಸಲು ಇಷ್ಟಪಡುವ ಆಟಗಾರ ಎಂದು ನನಗೆ ತಿಳಿದಿದೆ, ಆದರೆ ಅವರು ಇನ್ನೂ 50-ಓವರ್ ಗಳ ಆಟವನ್ನು ನಿಜವಾಗಿಯೂ ಕರಗತ ಮಾಡಿಕೊಂಡಿಲ್ಲ. ಅವರು 20 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಸಾಧಾರಣ ಪ್ರದರ್ಶನ ತೋರಿದ್ದಾರೆ. ಅವರು ಟಿ20 ಕ್ರಿಕೆಟ್‌ ನಲ್ಲಿ ಪ್ರತಿಭಾವಂತರಾಗಿದ್ದಾರೆ. ಆದರೆ 50-ಓವರ್‌ಗಳ ಕ್ರಿಕೆಟ್ ಸಂಪೂರ್ಣವಾಗಿ ವಿಭಿನ್ನ ಸ್ವರೂಪವಾಗಿದೆ. ಅದರ ಕೋಡ್ ಅನ್ನು ಅವರು ಇನ್ನೂ ಭೇದಿಸಿಲ್ಲ” ಎಂದು ಸ್ಟಾರ್ ಸ್ಪೋರ್ಟ್ಸ್‌ ನಲ್ಲಿ ಮೂಡಿ ಹೇಳಿದರು.

ಇದನ್ನೂ ಓದಿ:Raju Punjabi: ಜೀವ ತೆಗೆದ ಜಾಂಡೀಸ್; 40 ಹರೆಯದಲ್ಲಿ ಕೊನೆಯುಸಿರೆಳೆದ ಜನಪ್ರಿಯ ಗಾಯಕ

ಏಷ್ಯಾ ಕಪ್ ತಂಡದಲ್ಲಿ ಸೂರ್ಯಕುಮಾರ್ ಬದಲಿಗೆ ಜೈಸ್ವಾಲ್‌ ನಂತಹ ಕಿರಿಯ ಯಾರನ್ನಾದರೂ ಅಥವಾ ಹೆಚ್ಚುವರಿ ಸ್ಪಿನ್ನರ್‌ ನನ್ನು ತೆಗೆದುಕೊಳ್ಳ ಬಹುದಾಗಿತ್ತು ಎಂದು ಮೂಡಿ ಸಲಹೆ ನೀಡಿದರು.

ಇಲ್ಲಿಯವರೆಗೆ, ಸೂರ್ಯಕುಮಾರ್ ಯಾದವ್ 26 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 24 ಇನ್ನಿಂಗ್ಸ್‌ ಗಳಲ್ಲಿ ಅವರು ಸರಾಸರಿ 24.33ಯಲ್ಲಿ ಒಟ್ಟು 511 ರನ್ ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next