Advertisement

Asia Cup 2023; ಲಂಕಾ ವಿರುದ್ಧ ಟಾಸ್ ಗೆದ್ದ ರೋಹಿತ್; ತಂಡದಲ್ಲಿ ಒಂದು ಬದಲಾವಣೆ

02:38 PM Sep 12, 2023 | Team Udayavani |

ಕೊಲಂಬೊ: ಏಷ್ಯಾ ಕಪ್ 2023ರ ಕೂಟದ ಸೂಪರ್ ಫೋರ್ ಸುತ್ತಿನ ತನ್ನ ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಆತಿಥೇಯ ಶ್ರೀಲಂಕಾ ವಿರುದ್ಧದ ಸೂಪರ್ ಫೋರ್ ಕದನದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Advertisement

ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಶಾರ್ದೂಲ್ ಠಾಕೂರ್ ಬದಲಿಗೆ ಅಕ್ಷರ್ ಪಟೇಲ್ ಅವರು ತಂಡಕ್ಕೆ ಆಗಮಿಸಿದ್ದು, ಮೂವರು ಸ್ಪಿನ್ನರ್ ಗಳೊಂದಿಗೆ ಇಂದು ಕಣಕ್ಕಿಳಿದಿದೆ. ಉಳಿದಂತೆ ಪಾಕ್ ವಿರುದ್ಧ ಆಡಿದ ತಂಡವೇ ಇಂದು ಆಡಲಿದೆ.

ಕೊಲಂಬೊದಲ್ಲಿ ಇಂದು ಕೂಡಾ ಮೋಡ ಕವಿದ ವಾತಾವರಣವಿದ್ದು, ಆದರೆ ಇದುವರೆಗೆ ಮಳೆಯಾಗಿಲ್ಲ. ಈ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇರುವುದಿಲ್ಲ. ಹೀಗಾಗಿ ಇಂದಿನ ಪಂದ್ಯ ರದ್ದಾದರೆ ಎರಡು ತಂಡಗಳಿಗೆ ತಲಾ ಒಂದಂಕ ಸಿಗಲಿದೆ.

ಭಾರತವು ಇಂದಿನ ಪಂದ್ಯ ಗೆದ್ದರೆ ಬಹುತೇಕ ಫೈನಲ್ ಗೆ ಎಂಟ್ರಿಯಾಗಲಿದೆ. ಮತ್ತೊಂದೆಡೆ ಶ್ರೀಲಂಕಾವು ಮೊದಲ ಪಂದ್ಯ ಗೆದ್ದಿರುವ ಕಾರಣ ಅವರು ಇಂದು ಜಯಿಸಿದರೆ ಅವರ ಫೈನಲ್ ದಾರಿಯೂ ಸುಗಮವಾಗಲಿದೆ.

ತಂಡಗಳು

Advertisement

ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಶ್ರೀಲಂಕಾ: ಪತ್ತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿ.ಕೀ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾ), ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ

Advertisement

Udayavani is now on Telegram. Click here to join our channel and stay updated with the latest news.

Next