Advertisement
ಲೀಗ್ ಹಂತದಲ್ಲಿ ಭಾರತ 3-1 ಅಂತರದಿಂದ ಕೊರಿಯಾವನ್ನು ಹಿಮ್ಮೆಟ್ಟಿಸಿತ್ತು. ಕೊನೆಯ ಲೀಗ್ ಮುಖಾಮುಖಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 2-1 ಗೋಲುಗಳಿಂದ ಮಣಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಕೂಟದುದ್ದಕ್ಕೂ ಎಲ್ಲ ವಿಭಾಗಗಳಲ್ಲೂ ಭಾರತ ಪ್ರಭುತ್ವ ಸಾಧಿಸುತ್ತಲೇ ಬಂದಿದೆ. ಫಾರ್ವರ್ಡ್‌ಲೈನ್, ಮಿಡ್‌ಫಿàಲ್ಡ್, ಡಿಫೆನ್ಸ್ ವಿಭಾಗಗಳಲ್ಲಿ ಅಮೋಘ ಪ್ರದರ್ಶನ ನೀಡಿದೆ. ಸ್ಟ್ರೈಕರ್ ಫಾರ್ಮ್ ಅಮೋಘ ಮಟ್ಟದಲ್ಲಿದೆ. ಫೀಲ್ಡ್ ಗೋಲ್ ಬಾರಿಸುವುದರಲ್ಲಿ ಭರ್ಜರಿ ಯಶಸ್ಸು ಕಂಡಿರುವುದು ಪ್ಲಸ್ ಪಾಯಿಂಟ್. ಯುವ ಫಾರ್ವರ್ಡ್ ಆಟಗಾರರಾದ ಸುಖ್‌ಜೀತ್ ಸಿಂಗ್, ಅಭಿಷೇಕ್, ಉತ್ತಮ್ ಸಿಂಗ್, ಗುಜೋìತ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್ ಅವರೆಲ್ಲ ಗಮನ ಸೆಳೆಯುವ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಹಾಗೆಯೇ ಮಿಡ್‌ಫಿàಲ್ಡ್ ವಿಭಾಗದಲ್ಲಿ ರಾಜ್‌ಕುಮಾರ್ ಪಾಲ್ ಅತ್ಯಾಕರ್ಷಕ ಫೀಲ್ಡ್ ಗೋಲ್ ಮೂಲಕ ಹ್ಯಾಟ್ರಿಕ್ ಕೂಡ ಸಾಧಿಸಿದ್ದಾರೆ. ಹಿರಿಯ ಆಟಗಾರರಾದ ಮನ್‌ಪ್ರೀತ್ ಸಿಂಗ್, ಉಪನಾಯಕ ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮ ಕೂಡ ಉತ್ತಮ ಲಯದಲ್ಲಿದ್ದಾರೆ. ಪಿ.ಆರ್. ಶ್ರೀಜೇಶ್ ಸ್ಥಾನವನ್ನು ತುಂಬಿರುವ ಕೃಶನ್ ಬಹಾದೂರ್ ಪಾಠಕ್ ಮತ್ತು ಸೂರಜ್ ಕರ್ಕೆರಾ ಎದುರಾಳಿಗಳಿಗೆ ಬಿಟ್ಟುಕೊಟ್ಟದ್ದು 4 ಗೋಲು ಮಾತ್ರ.
Related Articles
Advertisement
ಭಾರತ-ಪಾಕ್ ಫೈನಲ್?ಪಾಕಿಸ್ಥಾನ-ಚೀನ ಮೊದಲ ಸೆಮಿಫೈನಲ್‌ನಲ್ಲಿ ಸೆಣಸಾಡಲಿದ್ದು (ಅಪರಾಹ್ನ 1.00), ಇಲ್ಲಿ ಪಾಕ್ ಫೇವರಿಟ್ ಆಗಿ ಗೋಚರಿಸುತ್ತಿದೆ. ಫೈನಲ್‌ನಲ್ಲಿ ಭಾರತ-ಪಾಕಿಸ್ಥಾನ ಮತ್ತೂಮ್ಮೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಫೈನಲ್ ಪಂದ್ಯ ಮಂಗಳವಾರ ನಡೆಯಲಿದೆ. ಭಾರತ-ಕೊರಿಯಾ
ಆರಂಭ: ಅ. 3.00
ಪ್ರಸಾರ: ಸೋನಿ ಸ್ಪೋರ್ಟ್ಸ್