Advertisement

ಏಷ್ಯನ್‌ ಚಾಂಪಿಯನ್ಸ್‌  ಟ್ರೋಫಿ ಹಾಕಿ: ಪಾಕ್‌ ವಿರುದ್ಧ ಮಲೇಷ್ಯಾಕ್ಕೆ 3-1 ಗೆಲುವು

12:25 AM Aug 04, 2023 | Team Udayavani |

ಚೆನ್ನೈ: ಫಿರ್ಹಾನ್‌ ಅಶಾರಿ ಅವರ ಅವಳಿ ಗೋಲಿನ ನೆರವಿನಿಂದ ಮಲೇಷ್ಯಾ ತಂಡವು ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಕೂಟದ ಪಂದ್ಯದಲ್ಲಿ ಪಾಕಿಸ್ಥಾನವನ್ನು 3-1 ಗೋಲುಗಳಿಂದ ಸೋಲಿಸಿದೆ.

Advertisement

ಮಲೇಷ್ಯಾ ಪರ ಅಶಾರಿ ಅವರು 28 ಮತ್ತು 29ನೇ ನಿಮಿಷದಲ್ಲಿ ಗೋಲು ಬಾರಿಸಿ ಸಂಭ್ರಮಿ ಸಿದರೆ ಶೆಲ್ಲೊ ಸಿಲ್ವೆರಿಯಸ್‌ 44ನೇ ನಿಮಿಷದಲ್ಲಿ ತಂಡದ ಮೂರನೇ ಗೋಲು ಹೊಡೆದರು. ಪಾಕಿ ಸ್ಥಾನದ ಪರ ಹೊಡೆದ ಏಕೈಕ ಗೋಲನ್ನು 55ನೇ ನಿಮಿಷದಲ್ಲಿ ಅಬ್ದುಲ್‌ ರೆಹ್ಮಾನ್‌ ಹೊಡೆದಿದ್ದರು.

ಪಂದ್ಯದ ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸಿದ ಮಲೇಷ್ಯಾ ಆಟಗಾರರು ಗೋಲು ಹೊಡೆಯಲು ಹಲವು ಪ್ರಯತ್ನ ನಡೆಸಿದರು. ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲು ಹೊಡೆಯುವ ಮೂಲಕ ಮಲೇಷ್ಯಾ ಮೇಲುಗೈ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next