Advertisement

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಜಪಾನ್‌ ವಿರುದ್ಧ ಭಾರತ ಪರದಾಟ

11:23 PM Aug 04, 2023 | Team Udayavani |

ಚೆನ್ನೈ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಕೂಟದ ದ್ವಿತೀಯ ಪಂದ್ಯದಲ್ಲಿ ಜಪಾನ್‌ ವಿರುದ್ಧ ಪರ ದಾಡಿದ ಭಾರತ 1-1 ಡ್ರಾ ಫ‌ಲಿತಾಂಶಕ್ಕೆ ಸಮಾಧಾನಪಟ್ಟಿದೆ.

Advertisement

ಮೊದಲ ಕ್ವಾರ್ಟರ್‌ನಲ್ಲೇ ಭಾರತ ಬರೋಬ್ಬರಿ 6 ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆಯಿತು. ಆದರೆ ಒಂದನ್ನೂ ಗೋಲಾಗಿಸುವಲ್ಲಿ ಯಶಸ್ವಿಯಾಗಲಿಲ್ಲ. ದ್ವಿತೀಯ ಕ್ವಾರ್ಟರ್‌ನಲ್ಲಿ ಬೆನ್ನು ಬೆನ್ನಿಗೆ ಗೋಲು ಗಳಿಕೆಯ ಚಾನ್ಸ್‌ ಸಿಕ್ಕಿತಾದರೂ ಇಲ್ಲಿಯೂ ಯಶಸ್ಸು ಕೈಹಿಡಿಯಲಿಲ್ಲ. ಆದರೆ ಜಪಾನ್‌ ಅವಕಾಶವನ್ನು ವ್ಯರ್ಥಗೊಳಿಸಲಿಲ್ಲ. 28ನೇ ನಿಮಿಷದಲ್ಲಿ ನಗಯೋಶಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲೊಂದನ್ನು ಬಾರಿಸಿ ಜಪಾನ್‌ ಪಾಳೆಯದಲ್ಲಿ ನಗು ಹೊಮ್ಮಿಸಿದರು.

43ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು. ಮೊದಲ ಪಂದ್ಯದಲ್ಲಿ ಭಾರತ 7-2 ಗೋಲುಗಳಿಂದ ಚೀನವನ್ನು ಮಣಿಸಿತ್ತು.

ಕೊರಿಯಾ-ಪಾಕ್‌ ಡ್ರಾ
ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯಾ ಮತ್ತು ಪಾಕಿಸ್ಥಾನ ನಡುವಿನ ದಿನದ ಮೊದಲ ಪಂದ್ಯ ಕೂಡ 1-1ರಿಂದ ಡ್ರಾ ಆಯಿತು. ಪಾಕಿಸ್ಥಾನ ಮೊದಲ ಮುಖಾಮುಖೀಯಲ್ಲಿ ಮಲೇಷ್ಯಾಕ್ಕೆ 1-3ರಿಂದ ಸೋತಿತ್ತು. ಕೊರಿಯಾ ತನ್ನ ಮೊದಲ ಪಂದ್ಯದಲ್ಲಿ ಜಪಾನ್‌ಗೆ 2-1 ಅಂತರದ ಸೋಲುಣಿಸಿತ್ತು.

ಇದು ಪಾಕಿಸ್ಥಾನ ತಂಡದ ನಾಯಕ ಉಮರ್‌ ಭುಟ್ಟ ಅವರ 200ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಈ ಸಂದರ್ಭದಲ್ಲಿ “ಹಾಕಿ ಇಂಡಿಯಾ’ ಪಾಕ್‌ ಕಪ್ತಾನನನ್ನು ಸಮ್ಮಾನಿಸಿ ಗೌರವಿಸಿತು.

Advertisement

ಮಲೇಷ್ಯಾ ಪರಾಕ್ರಮ
ಮೊದಲ ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸಿದ ಮಲೇಷ್ಯಾ, ಶುಕ್ರವಾರದ ಮುಖಾಮುಖಿಯಲ್ಲಿ ಚೀನದ ಮೇಲೆ ಸವಾರಿ ಮಾಡಿ 5-1 ಗೋಲುಗಳ ಜಯಭೇರಿ ಮೊಳಗಿಸಿತು. ಚೀನ ಎರಡೂ ಪಂದ್ಯಗಳನ್ನು ಸೋತಿತು.

Advertisement

Udayavani is now on Telegram. Click here to join our channel and stay updated with the latest news.

Next