Advertisement

Asian Champions Trophy ಹಾಕಿ ; ಮಲೇಷ್ಯಾಕ್ಕೆ 4-3 ಸೋಲುಣಿಸಿ ಪ್ರಶಸ್ತಿ ಗೆದ್ದ ಭಾರತ

11:05 PM Aug 12, 2023 | Team Udayavani |

ಚೆನ್ನೈ: ಇಲ್ಲಿನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತವು ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ ಸಾಧಿಸಿ ದಾಖಲೆಯ ನಾಲ್ಕನೇ ಎಸಿಟಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ಆರಂಭದಲ್ಲಿ, ಜುಗರಾಜ್ ಸಿಂಗ್ ಮೊದಲ ಕ್ವಾರ್ಟರ್‌ನಲ್ಲಿ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು, ಆದರೆ ಕಮಲ್ ಅಬು ಅರ್ಜೈ 1-1 ರಿಂದ ಸಮಬಲ ಸಾಧಿಸಿದರು.

ನಂತರ ಎರಡನೇ ಕ್ವಾರ್ಟರ್‌ನಲ್ಲಿ ರಾಝೀ ರಹೀಮ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಮಲೇಷ್ಯಾವನ್ನು 2-1 ರಿಂದ ಮುನ್ನಡೆಸಿದರು. ನಂತರ ಅಮಿನುದಿನ್ ಮುಹಮದ್ ಎರಡನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ 3-1 ಮಾಡಿ ಭಾರತಕ್ಕೆ ಸವಾಲೆಸೆದರು.

ಮೂರನೇ ಕ್ವಾರ್ಟರ್‌ನಲ್ಲಿ, ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು 2-3 ಗೆ ಪರಿವರ್ತಿಸಿದರು ಮತ್ತು ನಂತರ ಗುರ್ಜಂತ್ ಗೋಳು ಬಾರಿಸಿ ಸಮಬಲ 3-3 ಸ್ಕೋರ್‌ಗೆ ತಂದರು. ಆಕಾಶದೀಪ್ ಆಕರ್ಷಕ ಗೋಲು ಬಾರಿಸಿ ಭಾರತಕ್ಕೆ ದಾಖಲೆಯ ನಾಲ್ಕನೇ ACT ಪ್ರಶಸ್ತಿಯನ್ನು ಪಡೆಯಲು ನೆರವಾದರು.

Advertisement

Udayavani is now on Telegram. Click here to join our channel and stay updated with the latest news.

Next