Advertisement
ಮೂಲತಃ ಉತ್ತರಾಖಂಡ್‌ನವರಾದ ಕವಿಂದರ್, ಫಿನ್ಲಂಡ್‌ನಲ್ಲಿ ನಡೆದ ಗೀಬೀ ಟೂರ್ನಿಯಲ್ಲಿ ಬಂಗಾರ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. ಆದರೆ ಯೆರಲಿಯೇವ್ ಈವರೆಗೆ ಏಶ್ಯನ್ ಬಾಕ್ಸಿಂಗ್‌ನಲ್ಲಿ 2 ಕಂಚಿನ ಪದಕಗಳನ್ನಷ್ಟೇ ಜಯಿಸಿದ್ದಾರೆ. ಕಳೆದ ಏಶ್ಯನ್ ಗೇಮ್ಸ್‌ನಲ್ಲೂ ಅವರು ಕಂಚನ್ನೇ ಗೆದ್ದಿದ್ದರು.
52 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿದಿರುವ ಅಮಿತ್ ಪಂಘಲ್, ಒಲಿಂಪಿಕ್ ಚಾಂಪಿಯನ್ ಹಸನ್‌ಬಾಯ್ ದುಸ್ಮತೋವ್ ಅವರನ್ನು 3-2ರಿಂದ ಸೋಲಿಸಿ ಪದಕವನ್ನು ಖಾತ್ರಿಪಡಿಸಿದ್ದಾರೆ. 2015ರ ಕೂಟದಲ್ಲಿ ಪಂಘಲ್ ಕಂಚಿನ ಪದಕ ಜಯಿಸಿದ್ದರು. ಉಜ್ಬೆಕಿಸ್ಥಾನದ ದುಸ್ಮತೋವ್ ಕಳೆದ ಏಶ್ಯನ್ ಗೇಮ್ಸ್ ಫೈನಲ್‌ನಲ್ಲಿ ಪಂಘಲ್ ವಿರುದ್ಧ ಸೋಲನುಭವಿಸಿ ಚಿನ್ನ ಕಳೆದುಕೊಂಡಿದ್ದರು.
ರಾಷ್ಟ್ರೀಯ ಚಾಂಪಿಯನ್ ದೀಪಕ್ ಸಿಂಗ್ (49 ಕೆಜಿ) ಕೂಡ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅಫ್ಘಾನಿಸ್ಥಾನದ ರಮಿಶ್ ರೆಹಮಾನಿ ಗಾಯಾಳಾದ್ದರಿಂದ ದೀಪಕ್‌ಗೆ ವಾಕ್‌ಓವರ್ ಲಭಿಸಿತು. ರೋಹಿತ್ ತೋಕಾಸ್ (64 ಕೆಜಿ) ಮಂಗೋಲಿಯಾದ ಚಿಂಜೋರಿಗ್ ಬಾತರ್ಸುಕ್ ವಿರುದ್ಧ ದಿಟ್ಟ ಹೋರಾಟ ನೀಡಿಯೂ ಕ್ವಾರ್ಟರ್ ಫೈನಲ್‌ನಲ್ಲಿ 2-3 ಅಂತರದಿಂದ ಎಡವಿದರು. ಸೆಮಿಫೈನಲ್‌ಗೆ ಸೋನಿಯಾ
ವನಿತಾ ವಿಭಾಗದ ಸ್ಪರ್ಧೆಯಲ್ಲಿ ಸೋನಿಯಾ ಚಾಹಲ್ (57 ಕೆಜಿ) ಸೆಮಿಫೈನಲ್ ತಲುಪಿದ್ದಾರೆ. ಅವರು ಕೊರಿಯಾದ ಜೊ ಸನ್ ಹ್ವಾ ವಿರುದ್ಧ ಜಯ ಸಾಧಿಸಿದರು.
ಆದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಲೊವಿÉನಾ ಬೊರ್ಗೊಹೈನ್ (69 ಕೆಜಿ) ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್, ತೈವಾನ್‌ನ ಚೆನ್ ನೀನ್ ಚಿನ್ ವಿರುದ್ಧ 5-0 ಅಂತರದಿಂದ ಪರಾಭವಗೊಂಡರು.
ವನಿತೆಯರ ಮತ್ತೂಂದು ಸ್ಪರ್ಧೆಯಲ್ಲಿ ಸೀಮಾ ಪೂನಿಯ (+81 ಕೆಜಿ) ಚೀನದ ಯಾಂಗ್ ಕ್ಸಿಯೋಲಿ ವಿರುದ್ಧ 0-5 ಅಂತರದಿಂದ ಪರಾಭವಗೊಂಡರು.