Advertisement

ಡಿಸೆಂಬರ್‌ ನಲ್ಲಿ ಏಷ್ಯನ್ ಬಾಕ್ಸಿಂಗ್ ಕೂಟಕ್ಕೆ ಭಾರತ ಆತಿಥ್ಯ

10:14 AM Apr 14, 2020 | Team Udayavani |

ನವದೆಹಲಿ: ಕೊರೊನಾ ಭೀತಿಯ ನಡುವೆಯೂ ಈ ವರ್ಷ ನವೆಂಬರ್‌-ಡಿಸೆಂಬರ್‌ನಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದ ಏಷ್ಯನ್‌ ಬಾಕ್ಸಿಂಗ್‌ ಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ಭಾರತೀಯ ಬಾಕ್ಸಿಂಗ್‌ ಸಂಸ್ಥೆ ಆತ್ಮವಿಶ್ವಾಸ ವ್ಯಕ್ತಪಡಿಸಿದೆ.

Advertisement

ಕೂಟ ಆಯೋಜಿಸಲು ಇನ್ನೂ ಏಳೆಂಟು ತಿಂಗಳ ಕಾಲಾವಕಾಶವಿದೆ. ಅಷ್ಟರೊಳಗೆ ಎಲ್ಲವು ತಿಳಿಯಾಗಲಿದೆ. ಕೂಟ ನಡೆಸಲು ಯಾವುದೇ ಅಡ್ಡಿಯಾಗಲಾರದು ಎನ್ನುವುದು ಭಾರತೀಯ ಬಾಕ್ಸಿಂಗ್‌ ಒಕ್ಕೂಟ ಸಂಸ್ಥೆಯ ಧೈರ್ಯದ ಮಾತುಗಳಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಫ್ಐ ಕಾರ್ಯಕಾರಿ ನಿರ್ದೇಶಕ ಆರ್‌ಕೆ ಸಚೇತಿ “ಫೆಬ್ರವರಿಯಲ್ಲಿ ನಮಗೆ ಆತಿಥ್ಯದ ಹಕ್ಕು ಸಿಕ್ಕಿದೆ, ಈ ಪ್ರಕಾರವಾಗಿ ಕೂಟವನ್ನು ನಡೆಸಲು ಸಿದ್ಧವಾಗಿದ್ದೇವೆ. ಸದ್ಯದ ಸನ್ನಿವೇಶ ನೋಡಿದರೆ ಕೂಟ ಆಯೋಜಿಸುವುದು ಕಷ್ಟ ಎಂದು ಹೇಳಬಹುದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next