Advertisement
ದ್ಯುತಿ 11 ನಿಮಿಷ, 28 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ಈ ಮೂಲಕ ಕಳೆದ ವರ್ಷ ಗುವಾಹಟಿ ಯಲ್ಲಿ ನಿರ್ಮಿಸಿದ ರಾಷ್ಟ್ರೀಯ ದಾಖಲೆಯನ್ನು ಮುರಿದರು (11 ನಿಮಿಷ, 29 ಸೆಕೆಂಡ್).
400 ಮೀ. ಓಟದಲ್ಲಿ ಮಂಗ ಳೂರಿನ ಎಂ.ಆರ್. ಪೂವಮ್ಮ 52.46 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದಾರೆ. ಬಹ್ರೈನ್‌ನ ಸಲ್ವಾ ನಾಸಿರ್ (52.29 ಸೆಕೆಂಡ್) ಮೊದಲ ಸ್ಥಾನ ಪಡೆದರು. ಪುರುಷರ 400 ಮೀ. ಸ್ಪರ್ಧೆಯಲ್ಲಿ ಮೊಹಮ್ಮದ್ ಅನಾಸ್ 46.36 ಸೆಕೆಂಡ್‌ಗಳಲ್ಲಿ 4ನೇ ಸ್ಥಾನದಲ್ಲಿ ಓಟ ಮುಗಿಸಿ ಸೆಮಿಫೈನಲ್ ಪ್ರವೇಶಿಸಿದರು. 200 ಮೀ. ಓಟದಲ್ಲಿ ಅರೋಕಿಯಾ ರಾಜೀವ್ 46.25 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸೆಮಿಗೆ ಮುನ್ನಡೆದರು.
Related Articles
ಜಾವೆಲಿನ್ ತ್ರೋವರ್ ಅನ್ನು ರಾಣಿ ಮತ್ತು 5 ಸಾವಿರ ಮೀ. ಓಟಗಾರ್ತಿ ಪಾರುಲ್ ಚೌಧರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದು ಕೂಟದಲ್ಲಿ ಭಾರತದ ಪದಕದ ಖಾತೆ ತೆರೆದಿದ್ದಾರೆ. ಅನ್ನು ರಾಣಿ 60.22 ಮೀ. ದೂರದ ಸಾಧನೆ ಮಾಡಿದರು. ಪಾರುಲ್ 15 ನಿಮಿಷ, 36.03 ಸೆಕೆಂಡ್ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.
Advertisement