Advertisement

ಏಷ್ಯಾಡ್‌ ಫುಟ್ ಬಾಲ್ : ಚೆಟ್ರಿ ಹೆಸರು ಕಾಣೆ!

11:08 PM Jul 29, 2023 | Team Udayavani |

ಹೊಸದಿಲ್ಲಿ: ಅಭಿಮಾನಿಗಳ ಭಾರೀ ಪ್ರತಿಭಟನೆಯ ಬಳಿಕ ಭಾರತದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಮುಂದಿನ ಏಷ್ಯಾಡ್‌ಗೆ ಫುಟ್ ಬಾಲ್ ತಂಡಗಳನ್ನು ಕಳುಹಿಸಲು ಮುಂದಾದ ಬೆನ್ನಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ತಂಡದ ನಾಯಕ ಹಾಗೂ ಸ್ಟಾರ್‌ ಆಟಗಾರ ಸುನೀಲ್‌ ಚೆಟ್ರಿ ಅವರ ಹೆಸರು ತಂಡದ ಯಾದಿಯಿಂದ ಕಾಣೆಯಾಗಿದೆ.

Advertisement

ಹಿರಿಯ ಡಿಫೆಂಡರ್‌ ಸಂದೇಶ್‌ ಜಿಂಗಾನ್‌ ಮತ್ತು ಗೋಲಿ ಗುರುಪ್ರೀತ್‌ ಸಿಂಗ್‌ ಹೆಸರು ಕೂಡ ಕಾಣಿಸಿಲ್ಲ.

ಈ ಬಾರಿಯ ಏಷ್ಯಾಡ್‌ ಪುರುಷರ ತಂಡಕ್ಕೆ 23 ವರ್ಷ ವಯೋಮಿತಿಯ ಮಾನದಂಡ ಹೇರಿದೆ. 23 ಪ್ಲಸ್‌ ವಯಸ್ಸಿನ ಮೂವರಿಗಷ್ಟೇ ಅವಕಾಶ ಕಲ್ಪಿಸಿದೆ. ಆದರೆ ವನಿತಾ ತಂಡಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.

ಚೆಟ್ರಿ, ಜಿಂಗಾನ್‌ ಮತ್ತು ಮೊದಲ ಆಯ್ಕೆಯ ಗೋಲ್‌ಕೀಪರ್‌ ಗುರುಪ್ರೀತ್‌ ಈ ತಂಡದ ಭಾಗವಾಗಿರಲಿದ್ದಾರೆ ಎಂದು ಭಾರತೀಯ ಫುಟ್ ಬಾಲ್ ಫೆಡರೇಶನ್‌ ತಿಳಿಸಿತ್ತು. ಹೀಗಿರುವಾಗ ಇವರ ಹೆಸರು ಹೇಗೆ ಕಾಣೆಯಾದದ್ದು ಅಚ್ಚರಿಯಾಗಿ ಕಂಡಿದೆ. ಆದರೆ ಇದರ ಅಸಲಿ ಕಾರಣ ಬೇರೆಯೇ ಇದೆ.

ಡೆಡ್‌ಲೈನ್‌ ಸಂಕಟ
ಏಷ್ಯಾಡ್‌ ಫುಟ್ ಬಾಲ್ ತಂಡದ ಪ್ರಕಟನೆಗೆ ಜು. 15 ಅಂತಿಮ ದಿನ ವಾಗಿತ್ತು. ಆದರೆ ಭಾರತ ತಂಡ ಈ ಪ್ರತಿಷ್ಠಿತ ಕೂಟದಲ್ಲಿ ಪಾಲ್ಗೊಳ್ಳುವುದೇ ಅನುಮಾನವಾಗಿದ್ದ ಕಾರಣ, ಪಾಲ್ಗೊಂಡರೂ ಸೀನಿಯರ್ ಆಡು ವುದು ಅನುಮಾನವಾಗಿದ್ದ ರಿಂದ ಡೆಡ್‌ಲೈನ್‌ ಒಳಗೆ ತರಾ ತುರಿಯಲ್ಲಿ ತಂಡ ವೊಂದನ್ನು ರಚಿಸಿ ರವಾನಿಸಲಾಗಿತ್ತು. ಇದರಲ್ಲಿ ಈ ಮೂವರ ಹೆಸರಿರಲಿಲ್ಲ.

Advertisement

ಆದರೀಗ ಭಾರತ ತಂಡದ ಪಾಲ್ಗೊಳ್ಳುವಿಕೆ ಖಚಿತವಾದ ಬಳಿಕ ಈ ಸ್ಟಾರ್‌ ಆಟಗಾರರ ಅನುಪಸ್ಥಿತಿ ಕಾಡಲಾರಂಭಿಸಿದೆ. ಆದರೀಗ ಅಖೀಲ ಭಾರತ ಫುಟ್ ಬಾಲ್ ಫೆಡರೇಶನ್‌ ಅಧ್ಯಕ್ಷ ಕಲ್ಯಾಣೌ ಚೌಬೆ ಅವರು ಈ ಮೂವರ ಹೆಸರನ್ನು ಸೇರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇದನ್ನೊಂದು “ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಆಯ್ಕೆಗೆ ಅನುಮತಿ ನೀಡಬೇಕು ಎಂದು ಸಂಘಟಕರಲ್ಲಿ ವಿನಂತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next