Advertisement
ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಕ್ವಾಲಿಫೈಯರ್ ಶೂಟಿಂಗ್ ಸ್ಪರ್ಧೆಯ 25 ಮೀ. ರ್ಯಾಪಿಡ್ ಫೈರ್ ಸ್ಪರ್ಧೆಯಲ್ಲಿ ವಿಜಯವೀರ್ ಸಿಧು ಬೆಳ್ಳಿ ಪದಕ ಗೆದ್ದು ಅರ್ಹತೆ ಸಂಪಾದಿಸಿದರು. 21 ವರ್ಷದ ವಿಜಯವೀರ್ ಹ್ಯಾಂಗ್‌ಝೂ ಏಷ್ಯಾಡ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಶನಿವಾರದ ಸಾಧನೆಯೊಂದಿಗೆ 25 ಮೀ. ರ್ಯಾಪಿಡ್ ಫೈರ್ ಸ್ಪರ್ಧೆಯಲ್ಲಿ ಸೀನಿಯರ್ ಶೂಟರ್ ಅನೀಶ್ ಭನ್ವಾಲಾ ಅವರನ್ನು ಕೂಡಿಕೊಂಡರು. ಅನೀಶ್ ಕಳೆದ ವರ್ಷದ ಚಾಂಗನ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದರು.
ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆ ಎನ್ನುವುದು ಭಾರತೀ ಯರ ಪಾಲಿಗೆ ಅತ್ಯಂತ ಕಠಿನವಾಗಿ ಪರಿಣಮಿಸುತ್ತ ಬಂದಿದೆ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ವಿಜಯ್ ಕುಮಾರ್ ಬೆಳ್ಳಿ ಜಯಿಸಿದ್ದೇ ಅತ್ಯುತ್ತಮ ಸಾಧನೆ.
ಜಕಾರ್ತಾ ಕೂಟದ ಮೂಲಕ ಭಾರತಕ್ಕೆ 4 ಒಲಿಂಪಿಕ್ಸ್ ಕೋಟಾ ಲಭಿಸಿದಂತಾಯಿತು. ಇದಕ್ಕೂ ಮುನ್ನ ಇಶಾ ಸಿಂಗ್, ವರುಣ್ ತೋಮರ್ ಮತ್ತು ರಿದಂ ಸಂಗ್ವಾನ್ ಈ ಅವಕಾಶ ಪಡೆದಿದ್ದರು.