Advertisement
ಕಳೆದೆರಡು ಬಾರಿಯ ಚಾಂಪಿಯನ್, ಗರಿಷ್ಠ 4 ಸಲ ಪ್ರಶಸ್ತಿ ಗೆದ್ದಿರುವ ದಕ್ಷಿಣ ಕೊರಿಯಾ, 3 ಬಾರಿಯ ಚಾಂಪಿಯನ್ ಪಾಕಿಸ್ಥಾನ ಕಣದಲ್ಲಿರುವ ಅಪಾಯಕಾರಿ ತಂಡಗಳು. ಭಾರತ ಮತ್ತು ಪಾಕಿಸ್ಥಾನ ಒಂದೇ ವಿಭಾಗದಲ್ಲಿದ್ದು, ರವಿವಾರ ಸಂಜೆ ಹೋರಾಟಕ್ಕಿಳಿಯಲಿವೆ. ಶುಕ್ರವಾರ ಭಾರತ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದೆ.
Related Articles
ಈ ಬಾರಿ ಮನ್‌ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. “ಆರಂಭಿಕ ಪಂದ್ಯ ಯಾವತ್ತೂ ಸವಾಲಿನದ್ದಾಗಿರುತ್ತದೆ. ಆದರೆ ಈ ಸವಾಲಿಗೆ ಸಜ್ಜಾಗಿದ್ದೇವೆ’ ಎಂದಿದ್ದಾರೆ ಮನ್‌ಪ್ರೀತ್.
Advertisement
ಜಪಾನ್ ವಿರುದ್ಧ ಭಾರತ ಕೊನೆಯ ಸಲ “ಸುಲ್ತಾನ್ ಅಜ್ಲಾನ್ ಷಾ ಕಪ್’ ಪಂದ್ಯಾವಳಿಯಲ್ಲಿ ಆಡಿತ್ತು. ಭಾರೀ ಹೋರಾಟದ ಬಳಿಕ ಭಾರತ 4-3 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೇ ಕೂಟದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಜಪಾನ್ 3-2 ಗೋಲುಗಳಿಂದ ಆಘಾತವಿಕ್ಕಿದ್ದನ್ನು ಮರೆಯು ವಂತಿಲ್ಲ. ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವ ಏಶ್ಯನ್ ತಂಡವೆಂಬ ಹೆಗ್ಗಳಿಕೆ ಜಪಾನ್‌ನದ್ದು.
ಈ ಕೂಟಕ್ಕಾಗಿ ಭಾರತ ಯುವ ಆಟಗಾರರ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ. ಆಕಾಶ್ ಚಿಕ್ತೆ, ಸೂರಜ್ ಕರ್ಕೇರ ಗೋಲ್‌ಕೀಪರ್‌ಗಳಾಗಿ ಮುಂದುವರಿದಿದ್ದಾರೆ. ಡಿಫೆಂಡರ್‌ಗಳಾದ ಹರ್ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್ ತಂಡಕ್ಕೆ ಮರಳಿದ್ದಾರೆ. ಸ್ಟಾರ್ ಆಟಗಾರರದ ಆಕಾಶ್‌ದೀಪ್ ಸಿಂಗ್, ಮಾಜಿ ನಾಯಕ ಸರ್ದಾರ್ ಸಿಂಗ್, ಸತಿºàರ್ ಸಿಂಗ್, ಎಸ್.ವಿ. ಸುನೀಲ್ ಕೂಡ ತಂಡಕ್ಕೆ ವಾಪಸಾಗಿದ್ದಾರೆ. ಕರ್ನಾಟಕದ ಸುನೀಲ್ ಉಪನಾಯಕರಾಗಿದ್ದಾರೆ.
ಮುಂದಿನ 15 ತಿಂಗಳಲ್ಲಿ ನಡೆಯುವ ವರ್ಲ್ಡ್ ಲೀಗ್ ಫೈನಲ್, ಏಶ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವಕಪ್‌ಗೆ ಈ ಪಂದ್ಯಾವಳಿಯೊಂದು ದಿಕ್ಸೂಚಿಯಾಗಲಿರುವು ದರಿಂದ ಎಲ್ಲ ತಂಡಗಳೂ ಶಕ್ತಿಮೀರಿ ಹೋರಾಟ ನಡೆಸುವುದರಲ್ಲಿ ಅನುಮಾನವಿಲ್ಲ.