Advertisement

ರೋಹಿತ್‌, ಜಡೇಜ ಸಾಹಸ; ಭಾರತಕ್ಕೆ 7 ವಿಕೆಟ್‌ ಗೆಲುವು

06:00 AM Sep 22, 2018 | Team Udayavani |

ಅಬುಧಾಬಿ: ನಾಯಕ ರೋಹಿತ್‌ ಶರ್ಮ ಮತ್ತು ರವೀಂದ್ರ ಜಡೇಜ ಅವರ ಉತ್ತಮ ನಿರ್ವಹಣೆಯಿಂದಾಗಿ ಭಾರತವು ಏಶ್ಯಕಪ್‌ ಕ್ರಿಕೆಟ್‌ ಕೂಟದ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾ ದೇಶ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ದಾಖಲಿಸಿದೆ. ಜಡೇಜ ಸಹಿತ ಭಾರತೀಯ ಬೌಲರ್‌ಗಳ ನಿಖರ ದಾಳಿಯಿಂದಾಗಿ ಬಾಂಗ್ಲಾದೇಶ 173 ರನ್ನಿಗೆ ಆಲೌಟಾಯಿತು. ಇದ ಕ್ಕುತ್ತರವಾಗಿ ರೋಹಿತ್‌ ಅವರ ಅಜೇಯ 83 ರನ್‌ ನೆರವಿನಿಂದ ಭಾರತವು 36.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 174 ರನ್‌ ಗಳಿಸಿ ಜಯಭೇರಿ ಬಾರಿಸಿತು. ರೋಹಿತ್‌ 104 ಎಸೆತಗಳಿಂದ 83 ರನ್‌ ಗಳಿಸಿ ಅಜೇಯರಾಗಿ ಉಳಿದರು. 5 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಇದು ಅವರ ಸತತ ಎರಡನೇ ಅರ್ಧ ಶತಕವಾಗಿದೆ. ಶಿಖರ್‌ ಧವನ್‌ (40) ಮತ್ತು ಧೋನಿ 30 ರನ್‌ ಹೊಡೆದರು.

Advertisement

ಜಡೇಜ ಭರ್ಜರಿ ಪುನರಾಗಮನ
ಜಡೇಜ 29 ರನ್ನಿಗೆ 4 ವಿಕೆಟ್‌ ಕಿತ್ತು ಭರ್ಜರಿ ಪುನರಾಗಮನವನ್ನು ಸಾರಿದರು. 2017ರ ಜುಲೈ ಬಳಿಕ ಜಡೇಜ ಮೊದಲ ಏಕದಿನ ಪಂದ್ಯ ಆಡಲಿಳಿದಿದ್ದರು. ಪೇಸ್‌ ಬೌಲರ್‌ಗಳಾದ ಭುವನೇಶ್ವರ್‌ ಮತ್ತು ಬುಮ್ರಾ ಕೂಡ ಬಾಂಗ್ಲಾದ ಬ್ಯಾಟಿಂಗ್‌ ಸರದಿಯ ಮೇಲೆರಗಿ ತಲಾ 3 ವಿಕೆಟ್‌ ಕಬಳಿಸಿದರು. 

ಗ್ರೂಪ್‌ ಹಂತದಲ್ಲಿ ಅಫ್ಘಾನ್‌ಗೆ ಸೋತ 24 ಗಂಟೆಗಳೊಳಗೆ, 90 ನಿಮಿಷಗಳ ವಿಮಾನ ಪ್ರಯಾಣ ಮಾಡಿ ಆಡಲಿಳಿದ ಕಾರಣಕ್ಕೋ ಏನೋ, ಮೊರ್ತಜ ಪಡೆ ತೀವ್ರ ಒತ್ತಡದಲ್ಲಿದ್ದಂತೆ ಕಂಡುಬಂತು. ಭುವಿ-ಬುಮ್ರಾ ಜೋಡಿಯ ಘಾತಕ ಸ್ಪೆಲ್‌ ಬಾಂಗ್ಲಾ ಆರಂಭಿಕರನ್ನು ಕಂಗೆಡಿಸಿತು. 16 ರನ್‌ ಆಗುವಷ್ಟರಲ್ಲಿ ಓಪನರ್‌ಗಳಿಬ್ಬರೂ ಆಟ ಮುಗಿಸಿ ವಾಪಸಾದರು. ಬಾಂಗ್ಲಾದ ಮಧ್ಯಮ ಸರದಿಯ ಮೇಲೆ ಜಡೇಜ ಆಕ್ರಮಣಗೈದರು. 65 ರನ್ನಿಗೆ 5 ವಿಕೆಟ್‌ ಉರುಳಿತು. 

100 ರನ್ನಿಗೆ 32 ಓವರ್‌ !
ನಿರಂತರವಾಗಿ ವಿಕೆಟ್‌ ಉರುಳು ತ್ತಲೇ ಇದ್ದುದರಿಂದ ಬಾಂಗ್ಲಾದ ರನ್‌ ಗತಿಯೂ ಕುಂಠಿತಗೊಂಡಿತು. 100 ರನ್‌ ಪೂರ್ತಿಗೊಳಿಸಲು 32 ಓವರ್‌ ಬೇಕಾಯಿತು. 8ನೇ ವಿಕೆಟಿಗೆ ಜತೆ ಗೂಡಿದ ಮೊರ್ತಜ ಮತ್ತು ಮಿರಾಜ್‌ ಭಾರತದ ದಾಳಿ ಯನ್ನು ನಿಭಾಯಿಸು ವಲ್ಲಿ ಯಶಸ್ವಿಯಾದರು.

ಸ್ಕೋರ್‌ಪಟ್ಟಿ
ಬಾಂಗ್ಲಾದೇಶ

ಲಿಟ್ಟನ್‌ ದಾಸ್‌    ಸಿ ಜಾಧವ್‌ ಬಿ ಕುಮಾರ್‌    7
ನಜ್ಮುಲ್‌ ಹೊಸೇನ್‌    ಸಿ ಧವನ್‌ ಬಿ ಬುಮ್ರಾ    7
ಶಕಿಬ್‌ ಅಲ್‌ ಹಸನ್‌    ಸಿ ಧವನ್‌ ಬಿ ಜಡೇಜ    17
ಮುಶ್ಫಿಕರ್‌ ರಹೀಂ    ಸಿ ಚಾಹಲ್‌ ಬಿ ಜಡೇಜ    21
ಮೊಹಮ್ಮದ್‌ ಮಿಥುನ್‌    ಎಲ್‌ಬಿಡಬ್ಲ್ಯು ಜಡೇಜ    9
ಮಹಮದುಲ್ಲ    ಎಲ್‌ಬಿಡಬ್ಲ್ಯು ಕುಮಾರ್‌    25
ಮೊಸದೆಕ್‌ ಹೊಸೇನ್‌    ಸಿ ಧೋನಿ ಬಿ ಜಡೇಜ    12
ಮಶ್ರಫೆ ಮೊರ್ತಜ    ಸಿ ಬುಮ್ರಾ ಬಿ ಕುಮಾರ್‌    26
ಮೆಹೆದಿ ಹಸನ್‌ ಮಿರಾಜ್‌    ಸಿ ಧವನ್‌ ಬಿ ಬುಮ್ರಾ    42
ಮುಸ್ತಫಿಜುರ್‌ ರೆಹಮಾನ್‌    ಸಿ ಧವನ್‌ ಬಿ ಬುಮ್ರಾ    3
ರುಬೆಲ್‌ ಹೊಸೇನ್‌    ಔಟಾಗದೆ    1

Advertisement

ಇತರ        3
ಒಟ್ಟು  (49.1 ಓವರ್‌ಗಳಲ್ಲಿ ಆಲೌಟ್‌)    173
ವಿಕೆಟ್‌ ಪತನ: 1-15, 2-16, 3-42, 4-60, 5-65, 6-101, 7-101, 8-167, 9-169.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        10-1-32-3
ಜಸ್‌ಪ್ರೀತ್‌ ಬುಮ್ರಾ        9.1-1-37-3
ಯಜುವೇಂದ್ರ ಚಾಹಲ್‌        10-0-40-0
ರವೀಂದ್ರ ಜಡೇಜ        10-0-29-4
ಕುಲದೀಪ್‌ ಯಾದವ್‌        10-0-34-0

Advertisement

Udayavani is now on Telegram. Click here to join our channel and stay updated with the latest news.

Next