ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಮುಸ್ಲಿಂ ಸಂಘಟನೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
370 ನೇ ವಿಧಿಯಲ್ಲಿನ ವಾದವನ್ನು ಆಲಿಸುತ್ತಿರುವ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ನೇತೃತ್ವದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮುಂದೆ ವಕೀಲ ನಿಜಾಮ್ ಪಾಷಾ ಅವರು ಈ ವಿಷಯವನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಯನ್ನು ಕೋರಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಗುರುವಾರ ಆದೇಶ ನೀಡಿದೆ. ಆದೇಶದ ವಿರುದ್ಧ ನಾವು ಎಸ್‌ಎಲ್‌ಪಿ ಸಲ್ಲಿಸಿದ್ದೇವೆ. ಸಮೀಕ್ಷೆಗೆ ಮುಂದಾಗದಿರಲಿ ಎಂದು ತುರ್ತು ವಿಚಾರಣೆಯನ್ನು ಕೋರಿ ನಾನು ಇಮೇಲ್ ಕಳುಹಿಸಿದ್ದೇನೆ . ’’ ಎಂದು ಪಾಷಾ ಹೇಳಿದ್ದಾರೆ.
ಸಿಜೆಐ “ನಾನು ತಕ್ಷಣ ಇಮೇಲ್ ಅನ್ನು ನೋಡುತ್ತೇನೆ” ಎಂದು ಹೇಳಿದ್ದಾರೆ. ‘ಈ ವಿಚಾರದಲ್ಲಿ ತಮ್ಮ ವಿಚಾರಣೆ ನಡೆಸದೆ ಯಾವುದೇ ಆದೇಶ ಹೊರಡಿಸಬಾರದು’ ಎಂದು ಹಿಂದೂ ಪರ ಪಕ್ಷವೊಂದು ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಅರ್ಜಿ ಸಲ್ಲಿಸಿದೆ.
ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಲು ಅಲಹಾಬಾದ್ ಉಚ್ಛ ನ್ಯಾಯಾಲಯವು ಅನುಮತಿ ನೀಡಿ, ಸಮೀಕ್ಷೆಗೆ ಅವಕಾಶ ನೀಡಿದ್ದ ವಾರಾಣಸಿ ನ್ಯಾಯಾಲಯದ ಆದೇಶವನ್ನು ಹಿಡಿದಿತ್ತು.