ನವದೆಹಲಿ: ನವದೆಹಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಯಾವುದೇ ಪೂಜೆ, ಪುನಸ್ಕಾರಗಳಿಲ್ಲದೆ ಇರುವ ಗಣಪತಿಯ ವಿಗ್ರಹಗಳನ್ನು ಆ ಸ್ಥಳದಿಂದ ಸದ್ಯಕ್ಕೆ ಸ್ಥಳಾಂತರಿಸಕೂಡದೆಂದು ದೆಹಲಿಯ ಸಾಕೇತ್ ನ್ಯಾಯಾಲಯ ಆದೇಶಿಸಿದೆ.
ಜೊತೆಗೆ, ಮುಂದಿನ ತೀರ್ಪಿನವರೆಗೂ ಆ ಪ್ರಾಂತ್ಯದಲ್ಲಿರುವ ಪರಿಸ್ಥಿತಿಯನ್ನು ಯಥಾಸ್ಥಿಯಲ್ಲೇ ಮುಂದುವರಿಸಿಕೊಂಡು ಹೋಗುವಂತೆ ನ್ಯಾಯಾಲಯ ಸೂಚಿಸಿದೆ.
ನ್ಯಾಯವಾದಿ ಹರಿಶಂಕರ್ ಜೈನ್ ಎಂಬುವರು, ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದು, ಅಪಮಾನಕರವಾಗಿ ಬಿದ್ದಿರುವ ಗಣೇಶ ಮೂರ್ತಿಗಳನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ:ಮಲ್ಟಿ ಲೆವೆಲ್ ಮಾರ್ಕೆಟಿಂಗ್:ಇಡಿಯಿಂದ ಆ್ಯಮ್‌ವೇ ಇಂಡಿಯಾಗೆ ಸೇರಿದ 757 ಕೋ. ರೂ ಆಸ್ತಿ ಜಪ್ತಿ
ಈ ಹಿನ್ನೆಲೆಯಲ್ಲಿ, ಪ್ರತಿವಾದಿಗಳಾದ ಎನ್‌ಎಂಎ, ಎಎಸ್‌ಐ ಅಭಿಪ್ರಾಯವನ್ನು ನ್ಯಾಯಾಲಯ ಕೋರಿತ್ತು. ಇದಕ್ಕೆ ಉತ್ತರ ನೀಡಿದ್ದ ಎನ್‌ಎಎ, ತಾನೀಗಾಗಲೇ ಮೂರ್ತಿಗಳನ್ನು ಸ್ಥಳಾಂತರಿಸುವಂತೆ ಎಎಸ್‌ಐಗೆ ಮನವಿ ಮಾಡಿರುವುದಾಗಿ ಹೇಳಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.