Advertisement

ಪ್ರೀತಿಯ ಕಿಂಗ್ಸ್‌ಗೆ ಅಶ್ವಿ‌ನ್‌ ನಾಯಕ

06:25 AM Feb 27, 2018 | Team Udayavani |

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) 11ನೇ ಆವೃತ್ತಿಗೆ ಇಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕನಾಗಿ ಭಾರತ ತಂಡದ ಸ್ಪಿನ್ನರ್‌ ಆರ್‌.ಆಶ್ವಿ‌ನ್‌ ಆಯ್ಕೆಯಾಗಿದ್ದಾರೆ. ಪ್ರೀತಿ ಜಿಂಟಾ ಮಾಲಿಕತ್ವದ ಪಂಜಾಬ್‌ ತಂಡಕ್ಕೆ ಈ ಬಾರಿ ಯುವರಾಜ್‌ ಸಿಂಗ್‌ ವಾಪಸ್‌ ಆಗಿರುವುದರಿಂದ ನಾಯಕತ್ವದ ಹೊಣೆ ಯುವಿ ಹೊರುತ್ತಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ ಅಂತಿಮವಾಗಿ ಫ್ರಾಂಚೈಸಿ ಅಶ್ವಿ‌ನ್‌ಗೆ ಅವಕಾಶ ನೀಡಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಅಶ್ವಿ‌ನ್‌, ಪ್ರತಿಭಾವಂತ ಆಟಗಾರರನ್ನು ಹೊಂದಿರುವ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿರುವುದು ಹೆಮ್ಮೆ ಆಗುತ್ತಿದೆ. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಅಶ್ವಿ‌ನ್‌ ಆರಂಭದ 8 ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಎರಡು ಬಾರಿ ತಂಡ ಚಾಂಪಿಯನ್‌ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 

ಆದರೆ, ಕಳೆದ ಎರಡು ಆವೃತ್ತಿಯಲ್ಲಿ ಪುಣೆ ಸೂಪರ್‌ಜೈಂಟ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಈ ಬಾರಿ ಅಶ್ವಿ‌ನ್‌ 7.6 ಕೋಟಿ ರೂ.ಗೆ ಪಂಜಾಬ್‌ ತಂಡಕ್ಕೆ ಹರಾಜಾಗಿದ್ದಾರೆ. ಪಂಜಾಬ್‌ ತಂಡಕ್ಕೆ ಅಶ್ವಿ‌ನ್‌ 10ನೇ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ಗ್ಲೆನ್‌ ಮ್ಯಾಕ್ಸ್‌ವೆಲ್‌, ಮುರಳಿ ವಿಜಯ್‌, ಡೇವಿಡ್‌ ಮಿಲ್ಲರ್‌, ಜಾರ್ಜ್‌ ಬಿಲ್ಲಿ, ಡೇವಿಡ್‌ ಹಸ್ಸಿ, ಆ್ಯಡಂ ಗಿಲ್‌ಕ್ರಿಸ್ಟ್‌, ಜಯವರ್ದನೆ, ಸಂಗಾಕ್ಕಾರ, ಯುವರಾಜ್‌ ಸಿಂಗ್‌ ತಂಡವನ್ನು ಮುನ್ನಡೆಸಿದ್ದರು.

ಉಳಿದಂತೆ ಈ ಬಾರಿ ಪಂಜಾಬ್‌ ತಂಡದಲ್ಲಿ ತಾರಾ ಆಟಗಾರರಾದ ಕ್ರಿಸ್‌ ಗೇಲ್‌, ಯುವರಾಜ್‌ ಸಿಂಗ್‌, ಕೆ.ಎಲ್‌.ರಾಹುಲ್‌, ಏರಾನ್‌ ಫಿಂಚ್‌, ಡೇವಿಡ್‌ ಮಿಲ್ಲರ್‌ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next