Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದರು. ಅದಕ್ಕೆ ಸರ್ಕಾರ ಉತ್ತರ ಕೊಟ್ಟ ನಂತರ ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚೆ ಮಾಡದೆ ಅನಗತ್ಯ ಆರೋಪ ಮಾಡುವ ಚಾಳಿ ಶುರು ಮಾಡಿಕೊಂಡಿದ್ದಾರೆ ಎಂದರು.
Related Articles
Advertisement
ಬಸವರಾಜ್ ಬೊಮ್ಮಾಯಿ ಕ್ಲೀನ್ ಇಮೇಜ್ ಇರುವ ನಾಯಕ. ಜನತಾ ಪರಿವಾರದಿಂದ ಬಂದಿದ್ದಾರೆ. ಗೃಹ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಶೀಘ್ರ ಸಂಪುಟ ರಚನೆಯಾಗುತ್ತದೆ. ನಮ್ಮ ಪಕ್ಷದ ಬಗ್ಗೆ ಅನಗತ್ಯ ಹೇಳಿಕೆ ನೀಡದೆ ಸರ್ಕಾರದ ತಪ್ಪುಗಳಿದ್ದರೆ ಆರೋಪ ಮಾಡಿ ಸರಿಪಡಿಕೊಳ್ಳಲು ಸಹಾಯ ಮಾಡಿ. ಅದನ್ನು ಬಿಟ್ಟು ಅನಗತ್ಯ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಅಶ್ವಥ್ ನಾರಾಯಣ ಹೇಳಿದರು.
ಗಣೇಶ್ ಕಾರ್ಣಿಕ್ ಮಾತನಾಡಿ, ಕಾಂಗ್ರೆಸ್ ನಲ್ಲಿ ಆಚಾರವಿಲ್ಲದ ನಾಲಿಗೆ ಎನ್ನುವಂತೆ ಕೆಲವು ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಲ್ಲಭಭಾಯಿ ಪಟೇಲ್, ಅಂಬೇಡ್ಕರ್, ಪಿ.ವಿ. ನರಸಿಂಹ ರಾವ್ ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನರಸಿಂಹ ರಾವ್ ಅವರ ಜನ್ಮ ಶತಾಬ್ದಿಯನ್ನು ಸೌಜನ್ಯಕ್ಕೂ ಆಚರಿಸಲಿಲ್ಲ ಎಂದು ಟೀಕಿಸಿದರು.