ಕಲಬುರಗಿ: ಕೊನೆಯ ಘಳಿಗೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ವಾರ್ಡ್ ನಂಬರ್ 5ರಲ್ಲಿ ಪಕ್ಷೇತರಾಗಿ ಸ್ಪರ್ಧಿಸಿರುವ ಮಲ್ಲಮ್ಮ ಶಿವಾನಂದ ಪಾಟೀಲ್ ಅಷ್ಟಗಿ ಪರ ಇಲ್ಲಿನ ಶಹಾಬಜಾರ ಸುಲಫಲ ಮಠದ ಪೀಠಾಧಿಪತಿ ಹಾಗೂ ಶ್ರೀ ಶೈಲಂ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಪ್ರಚಾರ ನಡೆಸಿದರು.
ಅಷ್ಟಗಿ ಅವರು ವಾರ್ಡ್ ನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ವಾರ್ಡ್ ನ ಜನ ಅಷ್ಟಗಿ ಅವರನ್ನೇ ನೆಚ್ಚಿಕೊಂಡಿದ್ದಾರೆ. ಪಕ್ಷ ಅವರನ್ನೇ ಗುರುತಿಸಿ ಟಿಕೆಟ್ ನೀಡಬೇಕಿತ್ತು. ಆದರೆ ಟಿಕೆಟ್ ನೀಡದೇ ಅನ್ಯಾಯ ಎಸಗಲಾಗಿದೆ. ಹೀಗಾಗಿ ಕ್ಷೇತ್ರದ ಜನ ಕೈ ಹಿಡಿಯುವ ಮುಖಾಂತರ ಗೆಲ್ಲಿಸಬೇಕೆಂದರು.
ತಮ್ಮ ಪಾಡಿಗೆ ತಾವಿದ್ದು ಕೆಲಸ ಮಾಡುವರು ಅಪರೂಪ. ಅಂತಹ ಸಾಲಿನಲ್ಲಿ ಶಿವಾನಂದ ಅಷ್ಟಗಿ ಸೇರಿದ್ದಾರೆ. ಈಗ ಅವರ ಪತ್ನಿ ಮಲ್ಲಮ್ಮ ಅಷ್ಟಗಿ ಅಭ್ಯರ್ಥಿಯಾಗಿದ್ದಾರೆ. ಅಷ್ಟಗಿ ಅವರ ಮನೆ ಎಲ್ಲಿ ಬರುತ್ತದೆ ಎಂಬುದನ್ನು ನೋಡಿಲ್ಲ. ಆದರೆ ವಾರ್ಡ್ ಗೆ ಬಂದು ಜನರಿಗೆ ಆಗಿರುವ ಅನ್ಯಾಯ ವಿವರಿಸಲು ಹಾಗೂ ಬೆಂಬಲಿಸುವಂತೆ ತಿಳಿ ಹೇಳಲು ವಾರ್ಡ್ ನಂಬರ್ ಐದಕ್ಕೆ ಬಂದಿರುವುದಾಗಿ ಜಗದ್ಗುರುಗಳು ತಿಳಿಸಿದರು.
ಇದನ್ನೂ ಓದಿ:ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ಸುರಕ್ಷತಾ ಕಾರ್ಯ ಕೈಗೊಳ್ಳಿ : ನಟ ಚೇತನ್
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಅಷ್ಟಗಿ ಮಾತನಾಡಿ, ಗುರುಗಳು ವಾಡ್೯ಗೆ ಬಂದು ಬೆಂಬಲಿಸಿರುವುದು ನಮ್ಮ ಸೌಭಾಗ್ಯ, ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.
ಅಭ್ಯರ್ಥಿ ಮಲ್ಲಮ್ಮ ಶಿವಾನಂದ ಅಷ್ಠಗಿ, ಮುಖಂಡರಾದ ಸಿದ್ದು ತಾಳಮಡಗಿ, ನಾಗರಾಜ ವರದಾ, ರವಿ ಗುತ್ತೇದಾರ, ಸಂಜು ಕಠಾರೆ, ಶ್ರೀ ಕಾಂತ ಅಂಕಲಕಾರ, ಶರಣು ಹೇರೂರ, ಅನಂತಯ್ಯ ಮಠಪತಿ ಸೇರಿದಂತೆ ಮುಂತಾದವರಿದ್ದರು.