Advertisement

ಅಶೋಕ ಖೇಣಿ 198 ಕೋಟಿ ಒಡೆಯ

07:00 AM Apr 24, 2018 | Team Udayavani |

ಬೀದರ: ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ನೈಸ್‌ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ 198 ಕೋಟಿ ರೂ.ಗಳ ಒಡೆಯ.ಆದರೆ, ದೇಶ- ವಿದೇಶಗಳ ಬ್ಯಾಂಕ್‌ ಖಾತೆಗಳಲ್ಲಿ ಕೇವಲ 6.92 ಲಕ್ಷ ರೂ. ಮತ್ತು ಕೈಯಲ್ಲಿ ಕೇವಲ 50 ಸಾವಿರ ರೂ. ಮಾತ್ರ ನಗದು ಹೊಂದಿದ್ದಾರೆ. 109.92 ಕೋಟಿರೂ. ಚರಾಸ್ತಿ ಮತ್ತು 88.18 ಕೋಟಿ ರೂ. ಸ್ಥಿರಾಸ್ತಿ ಸೇರಿ 198 ಕೋಟಿ ರೂ. ಹಾಗೂ 54.19 ಕೋಟಿ ರೂ. ಸಾಲ ಇದೆ. ಅವರ ಯುಎಸ್‌ಎನಲ್ಲಿರುವ ಬ್ಯಾಂಕ್‌ ಖಾತೆಯಲ್ಲಿ ಕೇವಲ 9035 ರೂ. ಜಮೆ ಇದೆ. ಇನ್ನುಳಿದಂತೆ ಎಕ್ಸಿಸ್‌, ಕರ್ನಾಟಕ ಬ್ಯಾಂಕ್‌, ಐಸಿಐಸಿಐ, ಐಡಿಬಿಐ ಬ್ಯಾಂಕ್‌ಗಳು ಸೇರಿ 6.92 ಲಕ್ಷ ರೂ. ಹಣ ಇರುವುದಾಗಿ ತಿಳಿಸಿದ್ದಾರೆ.

Advertisement

ಯುಎಸ್‌ಎ ಸ್ಯಾಬ್‌ ಎಂಜಿನಿಯರಿಂಗ್‌ ಮತ್ತು ಎಆರ್‌ಎನ್‌ಬಿ ಕಂಪನಿ, ನಂದಿ ಇನಾ#†ಸ್ಟ್ರಕ್ಚರ್‌ ಸೇರಿ ವಿವಿಧ ಕಂಪನಿಗಳಲ್ಲಿ 21.13 ಕೋಟಿ ರೂ.ಷೇರುಗಳನ್ನು ಹೊಂದಿದ್ದಾರೆ. 1.69 ಕೋಟಿ ರೂ. ಮೌಲ್ಯದ ಚಿನ್ನಾಭರಣ, 27.55 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ, 19.51 ಕೋಟಿ ರೂ. ಮೌಲ್ಯದ ವಾಣಿಜ್ಯ ಮಳಿಗೆಗಳು ಮತ್ತು 60.57 ಕೋಟಿ ರೂ. ಮೌಲ್ಯದ ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. 99.24 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರುಗಳ ಒಡೆಯರಾಗಿರುವ ಅಶೋಕ ಖೇಣಿ ಬಳಿ ಫೋರ್ಡ್‌ ಮಸ್ಟಾಂಗ್‌, ಓಲ್ಡ್‌ಸ್‌ ಸಿಲ್‌ಹೌಟಿ ಬ್ಲೂ , ಮರ್ಸಿಡಿಜ್‌-350, ಫೆರಾರಿ ಮತ್ತು ಜಾಗ್ವಾರ್‌ ಕಂಪನಿಯ ಕಾರುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next