Advertisement

ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸಲು ಅಶೋಕ ಕರೆ

03:33 PM Nov 08, 2021 | Shwetha M |

ರಬಕವಿ-ಬನಹಟ್ಟಿ: ಪೋಷಕರು ಮಕ್ಕಳಿಗೆ ತಮ್ಮಿಚ್ಛೆಯಂತೆ ಶಿಕ್ಷಣ ನೀಡುವ ಬದಲಾಗಿ ಮಕ್ಕಳಲ್ಲಿ ಯಾವ ವಿಭಾಗದಲ್ಲಿ ಆಸಕ್ತಿ ಇರುವುದೋ ಅದರಲ್ಲೇ ಶಿಕ್ಷಣ ಕೊಡಿಸಲು ಮುಂದಾಗಬೇಕು. ಶಿಕ್ಷಣ ಉತ್ತಮ ಸಂಸ್ಕಾರ ಹೊಂದಲು ಮುಂದಿನ ಪೀಳಿಗೆಗೆ ದೀಪವಿದ್ದಂತೆ ಎಂದು ಐಸಿಐಸಿಐ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ಅಶೋಕ ಮಹಾಬಲಶೆಟ್ಟಿ ಹೇಳಿದರು.

Advertisement

ಬನಹಟ್ಟಿಯ ಬಸವೇಶ್ವರ (ಬಿದರಿ) ಸಮುದಾಯ ಭವನದಲ್ಲಿ ರವಿವಾರ ಬಣಜಿಗ ಸಮಾಜದ ನಗರ ಘಟಕ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಮಾಜ ಬಾಂಧವರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇವಲ ಮೆಡಿಕಲ್‌, ಇಂಜಿನಿಯರಿಂಗ್‌ ವಿಭಾಗಗಳಲ್ಲಿ ಮಾತ್ರ ಮಕ್ಕಳನ್ನು ಪ್ರವೇಶ ಕೊಡಿಸಲು ಹರ ಸಾಹಸ ಪಡುವ ಬದಲು ಸಾಕಷ್ಟು ಬೇಡಿಕೆ ಇರುವ ಮತ್ತು ಶಿಕ್ಷಣದ ಬಳಿಕ ತಕ್ಷಣ ಉದ್ಯೋಗ ದೊರೆಯುವ ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಇತರೆ ವಿಭಾಗಗಳಲ್ಲಿಯೂ ನಮ್ಮ ಮಕ್ಕಳಿಗೆ ಭವಿಷ್ಯ ಕಲ್ಪಿಸಲು ಯೋಚಿಸಬೇಕಿದೆ ಎಂದರು.

ಬಣಜಿಗ ಸಮಾಜ ಉತ್ತಮ ಪರಂಪರೆಯುಳ್ಳ ಮತ್ತು ಸಂಸ್ಕಾರಯುತ ಸಮಾಜವಾಗಿದೆ. ನಮ್ಮ ಮಕ್ಕಳಿಗೆ ನಮ್ಮ ನಡವಳಿಕೆಯೇ ಪ್ರಭಾವ ಬೀರುವುದರಿಂದ ಜಾಗೃತರಾಗಬೇಕು. ಎಲ್ಲ ವಿಷಯಗಳ ಜತೆಗೆ ವಿಶ್ವದ ಸಂವಹನ ಭಾಷೆಯಾಗಿರುವ ಇಂಗ್ಲಿಷ್‌ನತ್ತ ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸಬೇಕು. ಬಣಜಿಗ ಸಮಾಜದ ಒಳಬೇಗುದಿಯಿಂದ ರಾಜಕೀಯ ಕ್ಷೇತ್ರದಲ್ಲಿ ಸಮಾಜಕ್ಕೆ ಹಿನ್ನಡೆಯಾಗುತ್ತಿದೆ ಎಂದರು.

ಅಧ್ಯಕ್ಷ ಪ್ರಕಾಶ ಬಂದಿ, ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಈಶ್ವರಣ್ಣ ಬಿದರಿ, ಕಸ್ತೂರಿ ಹುಲಗಬಾಳಿ, ಆದಿತಿ ಬಿದರಿ, ಮಹಾಲಿಂಗಪ್ಪ ಹುಲಗಬಾಳಿ ಹಾಜರಿದ್ದರು. ಡಾ| ಪ್ರಿಯಂವದಾ ಅಣೆಪ್ಪನವರ, ನಂದಾ ಕಲ್ಯಾಣಿ, ಗೌತಮ ಕೊಟ್ರಶೆಟ್ಟಿ ಸೇರಿದಂತೆ ಎಸ್‌ಎಸ್‌ಎಲ್‌ಸಿ, ಪಿಯು, ಬಿಇ. ಸಿಎ, ಪದವಿಗಳಲ್ಲಿ ಸಾಧನೆ ಮೆರೆದ ಸಮಾಜದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಶಾಂತಾ ಕಾಡಪ್ಪ ಬಿದರಿ ಸ್ವಾಗತಿಸಿದರು. ಶಶಿಕಲಾ ಜಿಗಜಿನ್ನಿ ಸಂದೇಶ ವಾಚಿಸಿದರು. ರಜನಿ ಶೇಠೆ ಮಹಿಳಾ ಘಟಕದ ವರದಿ, ಮಹಾಶಾಂತ ಶೆಟ್ಟಿ ಸಮಾಜದ ವಾರ್ಷಿಕ ವರದಿ ವಾಚಿಸಿದರು. ಶಿವಾನಂದ ಮಹಾಬಲಶೆಟ್ಟಿ, ಮಲ್ಲಿಕಾರ್ಜುನ ಗಡೆನ್ನವರ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next