Advertisement

ತೇಜಸ್ವಿ ಪರ ಅಶೋಕ್‌ ರೋಡ್‌ ಶೋ

12:44 AM Apr 11, 2019 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಬುಧವಾರ ರೋಡ್‌ ಶೋ, ಪಾದಯಾತ್ರೆ ನಡೆಸಿ ಪ್ರಚಾರ ನಡೆಸಿದರು.

Advertisement

ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿನಗರ, ಜೆ.ಪಿ.ನಗರ, ಸಾರಕ್ಕಿ ವಾರ್ಡ್‌ಗಳಲ್ಲಿ ಪಾದಯಾತ್ರೆ ನಡೆಸಿದ ಅಶೋಕ್‌ ಅವರಿಗೆ ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಸಾಥ್‌ ನೀಡಿದರು. ಬಳಿಕ ಪದ್ಮನಾಭನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.

ಸಂಜೆ ಬಸವನಗುಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಆರ್‌.ಅಶೋಕ್‌, ಶಾಸಕ ಉದಯ್‌ ಗರುಡಾಚಾರ್‌ ಸೇರಿದಂತೆ ಹಲವು ಮುಖಂಡರೊಂದಿಗೆ ರೋಡ್‌ ಶೋ ನಡೆಸಿದರು. ಗಾಂಧಿ ಬಜಾರ್‌ ಮುಖ್ಯರಸ್ತೆ, ಸುಂಕೇನಹಳ್ಳಿ, ಕೆಂಪೇಗೌಡನಗರ, ವಿ.ವಿ.ಪುರ ಭಾಗದಲ್ಲಿ ರ್ಯಾಲಿ ನಡೆಸಿ ಮತ ಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next