Advertisement

15 ದಿನ ‘ನಾನ್‌ ವರ್ಕಿಂಗ್‌ ಡೇಸ್‌’ಘೋಷಿಸಿದ ಲೈಲ್ಯಾಂಡ್‌

09:45 AM Oct 05, 2019 | Hari Prasad |

ಹೊಸದಿಲ್ಲಿ: ದೇಶದ ಅತೀ ದೊಡ್ಡ ಕಮರ್ಷಿಯಲ್‌ ವಾಹನ ತಯಾರಕ ಸಂಸ್ಥೆ ಅಶೋಕ್‌ ಲೈಲ್ಯಾಂಡ್‌ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಮಾರಾಟವನ್ನು ದಾಖಲಿಸಿದೆ. ಅಗಸ್ಟ್‌ ತಿಂಗಳಲ್ಲಿ ಚೆನ್ನಾಗಿ ಇದ್ದ ಉದ್ಯಮ ಸೆಪ್ಟಂಬರ್‌ನಲ್ಲಿ ಶೇ. 56.7ರಷ್ಟು ಕುಸಿತ ಕಂಡಿದೆ. ಈ ಮೂಲಕ ಕುಸಿಯುತ್ತಿರುವ ಅಟೋಮೊಬೈಲ್‌ ರಂಗದ ಸಾಲಿಗೆ ಅಶೋಕ್‌ ಲೈಲ್ಯಾಂಡ್‌ ಸೇರಿದಂತಾಗಿದೆ. ಈ ಕುರಿತಂತೆ ಶುಕ್ರವಾರ ಸಂಸ್ಥೆ ಖಚಿತ ಮಾಹಿತಿ ನೀಡಿದ್ದು, ಕೆಲವು ದಿನಗಳು ಕೆಲಸ ಸ್ಥಗಿತಗೊಳಿಸಲಿದ್ದೇವೆ ಎಂದಿದೆ.

Advertisement

ಇದರಿಂದ ತನ್ನ ಎಲ್ಲಾ ಕೇಂದ್ರಗಳಲ್ಲಿ ಮುಂಬರುವ‌ 15ದಿನಗಳ ಕಾಲ ಉತ್ಪಾದನ ಚಟುವಟಿಕೆಗಳನ್ನು ನಿಲ್ಲಿಸಲಿದ್ದು, ‘ನಾನ್‌ ವಿರ್ಕಿಂಗ್‌ ಡೇಸ್‌’ ಎಂದು ಪರಿಗಣಿಸಿದೆ. ಇದು ಸದ್ಯ ನಷ್ಟದಲ್ಲಿನ ಸಂಸ್ಥೆಯನ್ನು ಪಾರು ಮಾಡಲು ಸಹಾಯವಾಗಬಹುದು ಎಂಬುದು ಸಂಸ್ಥೆ ಯೋಚನೆಯಾಗಿದೆ. ಅಶೋಕ್‌ ಲೈಲ್ಯಾಂಡ್‌ ದೇಶದ ಅತೀ ದೊಡ್ಡ ಸರಕು ವಾಹನಗಳನ್ನು ಹೊಂದಿದ್ದು, ಭಾರೀ ಗಾತ್ರದ, ಮಧ್ಯಮ ಗಾತ್ರ ಮತ್ತು ಸಣ್ಣ ಗಾತ್ರದ ವಾಹನಗಳನ್ನು ಹೊಂದಿದೆ.

ಕಳೆದ ತಿಂಗಳಲ್ಲಿ ಚೆನ್ನೈ ಮೂಲದ ಉದ್ಯಮವೊಂದು 16 ದಿನಗಳನ್ನು ‘ನಾನು ವರ್ಕಿಂಗ್‌ ಡೇಸ್‌’ ಎಂದು ಪರಿಗಣಿಸಿತ್ತು. ತಮಿಳುನಾಡಿನ ಹೊಸೂರ್ ನಲ್ಲಿ 5 ದಿನ, ರಾಜಸ್ಥಾನದ ಅಲ್ವಾರ್‌ ಮತ್ತು ಮಹಾರಾಷ್ಟ್ರದಲ್ಲಿ 10 ದಿನಗಳು, ಉತ್ತರಖಂಡ್‌ ನ‌ ಪಂತ್‌ ನಗರ್‌ ನಲ್ಲಿ 18 ದಿನಗಳನ್ನು ‘ಚಟುವಟಿಕೆ ರಹಿತ ದಿನ’ ಎಂದು ಕರೆದಿತ್ತು. ಮುಂಬರುವ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದರೆ ಬಹುತೇಕ ವಾಹನ ತಯಾರಿಕ ಸಂಸ್ಥೆಗಳು ಇದೇ ನಡೆಯನ್ನು ಅನುಸರಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next