ನವ ದೆಹಲಿ : ಹಿಂದುಜಾ ಗ್ರೂಪ್ (ಅಶೋಕ ಲೇಲ್ಯಾಂಡ್) ಜುಲೈ ತಿಂಗಳಿನಲ್ಲಿ ತನ್ನ ಉತ್ಪಾದನೆಯಲ್ಲಿನ ಒಟ್ಟು ಮಾರಾಟದ ಪ್ರಮಾಣ ಹೆಚ್ಚಳವಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕಳೆದ ತಿಂಗಳಲಲಿ ಒಟ್ಟು 4, 776 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕೋವಿಡ್ ಸೋಂಕಿನ ಪರಿಣಾಮದ ನಡುವೆಯೂ ಸಂಸ್ಥೆಯ ಶೇಕಡಾ 81 ರಷ್ಟು ವಾಹನಗಳು ಮಾರಾಟವಾಗಿವೆ. ಕಳೆದ ತಿಂಗಳು ಇದು 4,283 ಯುನಿಟ್ ಗಳಿಂದ ಶೇ. 90 ಹೆಚ್ಚಳವನ್ನು ಕಂಡು 8,129 ಯೂನಿಟ್ ಗಳು ಮಾರಾಟದ ದಾಖಲೆಯನ್ನು ಸೃಷ್ಟಿಸಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಆಗಸ್ಟ್ 15: 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಜುಲೈನಲ್ಲಿ 3,473, ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ (ಎಂ ಆ್ಯಂಡ್ ಎಚ್ ಸಿವಿ) ಮಾರಾಟವಾಗಿವೆ. ಕಳೆದ ವರ್ಷದ ವ್ಯಾಪಾರ ವಹಿವಾಟಿಗೆ ಹೋಲಿಸಿದರೆ, ಈ ವರ್ಷವೇ ಅತಿ ಹೆಚ್ಚು ಮಾರಾಟವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇನ್ನು, ಕಳೆದ ವರ್ಷ (2020) ರಲ್ಲಿ 1,500 ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಮಾರಾಟವಾಗಿತ್ತು.
ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷ 4, 656 ಯೂನಿಟ್ ವಾಹನಗಳು ಮಾರಾಟವಾಗಿದೆ. ಕಳೆದ ವರ್ಷದ ಇದೆ ತಿಂಗಳಿನ ಮಾರಾಟವಾದ ವಾಹನಗಳಿಗೆ ಹೋಲಿಸಿದರೇ, ಈ ವರ್ಷ ದುಪ್ಪಟ್ಟು ಮಾರಾಟವಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ 2738 ಯೂನಿಟ್ ವಾಹನಗಳು ಮಾರಾಟವಾಗಿದ್ದವು.
ಇದನ್ನೂ ಓದಿ : ಕೇರಳ – ಕರ್ನಾಟಕ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ADGP ಪ್ರತಾಪ್ ರೆಡ್ಡಿ ಸೂಚನೆ