Advertisement

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

01:53 PM Dec 03, 2022 | Team Udayavani |

ಮುಂಬಯಿ: ಶಾರ್ಕ್‌ ಟ್ಯಾಂಕ್‌ ಇಂಡಿಯಾ ಶೋ ಮೂಲಕ ಜನಪ್ರಿಯರಾದ ಭಾರತ್‌ ಪೇ ಸಂಸ್ಥಾಪಕ ಅಶ್ನೀರ್​ ಗ್ರೋವರ್ ಹಿಂದಿಯ ಬಿಗ್‌ ಬಾಸ್‌ ಕಾರ್ಯಕ್ರಮದ ಬಗ್ಗೆ ಮಾತನಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

Advertisement

ಉದ್ಯಮಿಯಾಗಿರುವ ಅಶ್ನೀರ್​ ಗ್ರೋವರ್ ಹಿಂದಿಯ ಜನಪ್ರಿಯ ಶೋ ʼಶಾರ್ಜ್‌ ಟ್ಯಾಂಕ್‌ ಇಂಡಿಯಾʼ ದಲ್ಲಿ ತೀರ್ಪುಗಾರರಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ತನ್ನ ಆ್ಯಟಿಟ್ಯೂಡ್‌ ನಿಂದಲೇ ಜನರನ್ನು ಸೆಳೆದ ಅಶ್ನೀರ್​ ಗ್ರೋವರ್  ಕೋಟ್ಯಂತರ ವ್ಯವಹಾರವನ್ನು ಮಾಡುವ ಯಶಸ್ವಿ ಉದ್ಯಮಿಯೂ ಹೌದು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಬಿಗ್‌ ಬಾಸ್‌ ಕಾರ್ಯಕ್ರಮದ ಬಗ್ಗೆ ಮಾತಾನಾಡಿದ್ದು ಈಗ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಧೋನಿ ಬಳಿಕ ಸಿಎಸ್ ಕೆಗೆ ಯಾರು ನಾಯಕ?: ಗುಟ್ಟು ಬಿಚ್ಚಿಟ್ಟ ಕೋಚ್ ಮೈಕ್ ಹಸ್ಸಿ

“ನನಗೆ ಬಿಗ್‌ ಬಾಸ್‌ ಆಯೋಜಕರು, ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಲು ಕೇಳಿದ್ದರು. ಆದರೆ ನಾನು ಅವರ ಆಫರನ್ನು ತಿರಸ್ಕರಿಸಿದೆ. ನನ್ನ ಪ್ರಕಾರ ಜೀವನದಲ್ಲಿ ವೈಫಲ್ಯವನ್ನು ಅನುಭವಿಸಿದವರು ಮಾತ್ರ ಬಿಗ್‌ ಬಾಸ್‌ ನಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.ಮೊದಲಿಗೆ ನಾನು ಕಾರ್ಯಕ್ರಮವನ್ನು ನೋಡುತ್ತಿದ್ದೆ ಆದರೆ ಈಗ ಅದು ಹಳಸಿದ ಹಾಗೆ ಕಾಣುತ್ತದೆ” ಎಂದಿದ್ದಾರೆ.

ವಿಫಲಗೊಂಡಿರುವವರು ಮಾತ್ರ ಬಿಗ್‌ ಬಾಸ್‌ ಗೆ ಹೋಗುತ್ತಾರೆ. ಯಶಸ್ವಿ ವ್ಯಕ್ತಿಗಳಲ್ಲ. ನಾನು ಯಾವತ್ತೂ ಆ ಶೋಗೆ ಹೋಗಲ್ಲ. ನೀವು ಎಷ್ಟು ಹಣಕೊಟ್ಟರು ನಾನು ಅಲ್ಲಿಗೆ ಹೋಗಲ್ಲ. ಒಂದು ವೇಳೆ ಸಲ್ಮಾನ್‌ ಖಾನ್‌ ಗೆ ಕೊಟ್ಟ ಹಣದ್ದಷ್ಟು ನನಗೆ ಕೊಟ್ಟರೆ ಆಮೇಲೆ ನೋಡೋಣ ಎಂದು ಅವರು ಹೇಳಿದ್ದಾರೆ.

Advertisement

ಶಾರ್ಕ್‌ ಟ್ಯಾಂಗ್‌ ಸೀಸನ್‌ -2 ಶೀಘ್ರದಲ್ಲಿ ಬರಲಿದೆ. ಈ ಕಾರ್ಯಕ್ರಮದಲ್ಲಿ ಅಮಾನ್‌ ಗುಪ್ತ, ಅನುಪಮ್‌ ಮಿತ್ತಲು, ವಿನಿತಾ ಸಿಂಗ್‌, ನಮಿತಾ ತಾಪರ್,ಪಿಯೂಷ್‌ ಬನ್ಸಲ್‌ ಹಾಗೂ  ಕಾರ್‌ ದೇಕೋ ಸಿಎಓ ಅಮಿತ್‌ ಜೈನ್‌ ಜಡ್ಜ್‌ ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಅಶ್ನೀರ್​ ಗ್ರೋವರ್ ಈ ಸಲಿ ಕಾರ್ಯಕ್ರಮದ ಭಾಗವಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next