Advertisement

ಟೀಂ ಇಂಡಿಯಾ ಮುಂದಿನ ನಾಯಕನ ಹೆಸರು ಸೂಚಿಸಿದ ನೆಹ್ರಾ: ರೋಹಿತ್,ರಾಹುಲ್, ಪಂತ್ ಪಟ್ಟಿಯಲ್ಲಿಲ್ಲ

01:20 PM Nov 07, 2021 | Team Udayavani |

ಮುಂಬೈ: ಭಾರತ ಟಿ20 ತಂಡದ ಮುಂದಿನ ನಾಯಕ ಯಾರಾಗಬಹುದು ಎನ್ನುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ವಿರಾಟ್ ಕೊಹ್ಲಿ ಈ ವಿಶ್ವಕಪ್ ಬಳಿಕ ಚುಟುಕು ಮಾದರಿ ನಾಯಕತ್ವ ತ್ಯಜಿಸುತ್ತಿರುವುದು ಇದಕ್ಕೆಲ್ಲಾ ಕಾರಣ. ಹಲವು ಮಾಜಿ ಆಟಗಾರರು ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Advertisement

ಮಾಜಿ ವೇಗಿ ಆಶಿಷ್ ನೆಹ್ರಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮುಂದಿನ ನಾಯಕನ ಪ್ರಸ್ತಾಪವಾದಗೆಲ್ಲಾ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ರಿಷಭ್ ಪಂತ್ ಹೆಸರುಗಳು ಕೇಳಿಬರುತ್ತಿದೆ. ಆದರೆ ನೆಹ್ರಾ ಮಾತ್ರ ಇವರ ಬದಲಿಗೆ ವೇಗಿ ಜಸ್ಪ್ರೀತ್ ಬುಮ್ರಾಗೆ ನಾಯಕತ್ವ ವಹಿಸಬೇಕು ಎಂದಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್ 2022: ಎಂಟು ತಂಡಗಳಿಗೆ ನೇರ ಅರ್ಹತೆ, ಲಂಕಾ-ವಿಂಡೀಸ್ ಗಿಲ್ಲ ಈ ಅವಕಾಶ

“ರೋಹಿತ್ ಶರ್ಮಾ ಹೊರತಾಗಿ, ನಾವು ರಿಷಭ್ ಪಂತ್ ಮತ್ತು ಕೆ.ಎಲ್ ರಾಹುಲ್ ಅವರ ಹೆಸರುಗಳನ್ನು ಕೇಳುತ್ತಿದ್ದೇವೆ. ಪಂತ್ ಅವರು ಪ್ರಪಂಚದಾದ್ಯಂತ ಪ್ರಯಾಣಿಸಿದ್ದಾರೆ, ಹಲವು ಪಂದ್ಯಗಳಲ್ಲಿ ಬೆಮಚ್ ಕಾಯ್ದಿದ್ದಾರೆ, ಕೆಲವು ಬಾರಿ ತಂಡದಿಂದ ಕೈಬಿಡಲಾಗಿದೆ. ಮಯಾಂಕ್ ಅಗರ್ವಾಲ್ ನಂತರ ರಾಹುಲ್ ಅವರು ಟೆಸ್ಟ್ ತಂಡಕ್ಕೆ ಹಿಂತಿರುಗಿದ್ದಾರೆ. ಅಜಯ್ ಜಡೇಜಾ ಹೇಳಿದಂತೆ, ಬುಮ್ರಾ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರು ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಆಡುವ ಬಳಗದಲ್ಲಿದ್ದಾರೆ. ವೇಗಿಗಳು ನಾಯಕರಾಗಲು ಸಾಧ್ಯವಿಲ್ಲ ಎಂದು ನಿಯಮ ಪುಸ್ತಕದಲ್ಲಿ ಎಲ್ಲಿಯೂ ಬರೆಯಲಾಗಿಲ್ಲ”ಎಂದು ನೆಹ್ರಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next