Advertisement

ಲಖೀಂಪುರಖೇರಿ ಹಿಂಸಾಚಾರ: 15ರ ವರೆಗೆ ಆಶಿಶ್‌ ಪೊಲೀಸ್‌ ವಶಕ್ಕೆ

01:57 AM Oct 12, 2021 | Team Udayavani |

ಲಕ್ನೋ/ಲಖೀಂಪುರಖೇರಿ: ಲಖೀಂಪುರಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೇಂದ್ರ ಸಚಿವ ಅಜಯ ಕುಮಾರ್‌ ಮಿಶ್ರಾ ಪುತ್ರ ಅಶಿಶ್‌ ಮಿಶ್ರಾ ಅವರನ್ನು 3 ದಿನಗಳ ಕಾಲ ಪೊಲೀಸ್‌  ವಶಕ್ಕೆ ಒಪ್ಪಿಸಲಾಗಿದೆ.  ಈ ಬಗ್ಗೆ ಸ್ಥಳೀಯ ಕೋರ್ಟ್‌ ಸೋಮವಾರ ಆದೇಶ ನೀಡಿದೆ. ಹೀಗಾಗಿ ಅ.15 ರಂದು ಪೊಲೀಸ್‌ ವಶದ ಅವಧಿ ಮುಕ್ತಾಯವಾಗಲಿದೆ.

Advertisement

ಶನಿವಾರ ರಾತ್ರಿ ಆಶಿಶ್‌ರನ್ನು ಬಂಧಿಸಲಾಗಿತ್ತು ಅವರನ್ನು 14 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯನ್ನು ಅ.12ರಿಂದ ಅ.15ರವರೆಗೆ ಪೊಲೀಸ್‌ ವಶಕ್ಕೆ ನೀಡಿದೆ. ಈ ಸಮಯದಲ್ಲಿ ಅವರಿಗೆ  ಯಾವುದೇ ರೀತಿಯಲ್ಲಿ ಹಿಂಸೆ ಮಾಡುವಂತಿಲ್ಲ ಹಾಗೂ ಅವರ ಪರ ವಕೀಲರ ಸಮ್ಮುಖದಲ್ಲೇ ವಿಚಾರಣೆ ನಡೆಸಬೇಕೆಂಬ ಷರತ್ತನ್ನು ನ್ಯಾಯಾಲಯ ಹಾಕಿದೆ.

ಮೌನ ಪ್ರತಿಭಟನೆ: ಅ.3ರ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದಿಂದ ಅಜಯ ಕುಮಾರ್‌ ಮಿಶ್ರಾರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಲಕ್ನೋದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಅದಕ್ಕೆ ಪೂರಕವಾಗಿ ದೇಶಾದ್ಯಂತ ಕಾಂಗ್ರೆಸ್‌ ಮುಖಂಡರು, ಕಾರ್ಯ ಕರ್ತರು “ಮೌನ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ತಂಬಾಕು ಜಾಹೀರಾತಿಂದ ಬಿಗ್‌ ಬಿ ಹೊರಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next