Advertisement

ನಮ್ಮೊಳಗಿನ ದೋಷ ಬಿಟ್ಟರೆ ಸಾಧನೆ: ಸ್ವರ್ಣವಲ್ಲೀ

01:44 PM Jan 04, 2022 | Team Udayavani |

ಶಿರಸಿ: ಗೀತೆಯ ಸಾರವೇ ತ್ಯಾಗ. ಗೀತಾ ಎಂಬ ಶಬ್ದವನ್ನೇ ಹತ್ತಾರು ಸಲ ಹೇಳಿದರೂ ತ್ಯಾಗಿ ಆಗುತ್ತದೆ. ನಮ್ಮೊಳಗಿನವದನ್ನು ಬಿಟ್ ಕೊಡುವದೂ ತ್ಯಾಗ. ತ್ಯಾಗ‌ ಮಾಡಿದಾಗಲೇ  ಸಾಧನೆ ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ‌ಶ್ರೀಗಂಗಾಧರೇಂದ್ರ‌ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.

Advertisement

ಮಂಗಳವಾರ ಅವರು ನಗರದ ಎಂಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ‌ ಮಾತನಾಡಿ,ದ್ವೇಷ, ಮೈತ್ರಿ ಭಾವದಿಂದ‌ ಇರಬೇಕು, ಕಠೋರಭಾವ ಬಿಡಬೇಕು. ಆಗ ಸಾಧನೆ ಸಾಧ್ಯ. ಶ್ರೇಷ್ಠ ಸಾಧನೆ ಮಾಡಿದವರು ಯಾರೂ ಸುಖದಲ್ಲಿ‌ ಇಲ್ಲ ಎಂದ ಶ್ರೀಗಳು, ವಿದ್ಯಾರ್ಥಿಗಳು ಹಾಯಾಗಿರಬೇಕು ಎಂದರೆ ವಿದ್ಯೆ ಬಿಟ್ಟಂತೆ. ವಿದ್ಯೆ ಸಿಗಬೇಕಾದರೆ ಸುಖದ ಗೋಜಿಗೆ ಹೋಗಬಾರದು. ಶ್ರೇಷ್ಠ ಸಾಧಕರು ಹಾಯಾಗಿರಬೇಕು ದೃಷ್ಟಿಗೆ ಹೋಗದೇ ಸಾಧನೆಗೆ ಲಕ್ಷ್ಯ ಹಾಕಿದ್ದರು ಎಂದರು.

ಶ್ರೇಷ್ಠ ಸಾಧನೆಗೆ‌ ಮೂರು ದೊಡ್ಡ ವಿಘ್ನಗಳಿವೆ:

ಬಾಲ್ಯದಲ್ಲಿ ಆಟದ ಆಸೆ, ಯುವ ಅವಸ್ಥೆಯಲ್ಲಿ ಅನುಭೊಗದ ಆಸೆ, ವೃದ್ದನಾಗಿದ್ದಾಗ ಚಿಂತೆಯ ವಿಘ್ನಗಳು ಇರುತ್ತವೆ. ಮನಸ್ಸು ಚಂಚಲ ಆಗುತ್ತದೆ. ವಿಷಯಾಕರ್ಷಣೆ ಗೆಲ್ಲಿಸಿ ಅದನ್ನು ದಾಟಿದರೆ ಸಾಧನೆ ಸಾಧ್ಯ. ಯೌವ್ವನವೇ ಸಾಧನಾ ಕಾಲ ಎಂದು ಸಲಹೆ‌ ಮಾಡಿದರು. ಒಳ್ಳೆಯ ಸಂಸ್ಕಾರ ಮಕ್ಕಲಿದ್ದಾಗ ಸಿಗಬೇಕು.ಯೌವ್ವನಲ್ಲಿ ಒಳ್ಳೆಯ ಸಾಧನೆ ಗುರುತಿಸಬೇಕು ಎಂದ ಶ್ರೀಗಳು ಹಲವು ಉದಾಹರಣೆ ಸಹಿತ‌ ಮಾತನಾಡಿದರು.

ಎಂಇಎಸ್ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ.ಹೆಗಡೆ‌ ಮುಳಖಂಡ, ಶಿಕ್ಷಣ ಸಂಸ್ಥೆಗಳು ಪಾಠ ಮಾಡಬಹುದು, ಅಪ್ಪ‌ ಅಮ್ಮ ಜವಬ್ದಾರಿ ಜೊತೆಗೆ ಗುರುಪೀಠಗಳೂ ಸಂಸ್ಕಾರ ‌ಮಾರ್ಗದರ್ಶನ ಪಡೆಯಬಹುದು. ಶೀಘ್ರ ಪಾಲಕರ ಸಭೆ ಕೂಡ ಕರೆಯಲಿದ್ದೇವೆ ಎಂದರು.  ಪ್ರಾಚಾರ್ಯೆ ಕೋಮಲಾ‌ ಭಟ್ಟ, ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿದ ಸಂಸ್ಥೆಯ ಕಳಂಕಗಳು ಕೂಡ ದೂರವಾಗಲಿ ಎಂದರು.

Advertisement

ಪ್ರಮುಖರಾದ ಕೆ.ಬಿ.ಲೋಕೇಶ ಹೆಗಡೆ, ಗಣೇಶ ಹೆಗಡೆ, ಉಮಾಪತಿ ಭಟ್ಟ‌ ಮತ್ತಿಗಾರ, ಎಸ್.ಕೆ‌ ಭಾಗವತ, ಕೆ.ವಿ.ಭಟ್ಟ‌ ಇತರರು ಇದ್ದರು. ಮಂಜುನಾಥ ಹೆಗಡೆ ನಿರ್ವಹಿಸಿದರು.

ಇದೇ ವೇಳೆ ನಕ್ಷತ್ರ ವನ‌ ನಿರ್ಮಾಣಕ್ಕೆ 50 ಸಾವಿರ ದೇಣಿಗೆಯನ್ನು ಪ್ರಾಚಾರ್ಯೆ ಕೋಮಲಾ ಭಟ್ಟ ನೀಡಿದರು. ಶ್ರೀಗಳು ಕಾಕೇಜಿನ ಆವರಣದಲ್ಲಿ ವೃಕ್ಣಾರೋಪಣ ನಡೆಸಿದರು.

ಕರ್ಮ, ಭಕ್ತಿ, ಸಾಧನೆಗೆ ನಾವು ಆಯ್ಕೆ‌ ಮಾಡಿಕೊಳ್ಳಬೇಕು. ಈ‌ ಮೂವರಲ್ಲಿ ಒಂದಾದರೂ ಜೀವನದಲ್ಲಿ ಆಚರಣೆಗೆ ತಂದ ತರಬೇಕು. ಬ್ರಹ್ಮಚರ್ಯ ಸಾಧನೆಗೆ ನೆರವಾಗುತ್ತದೆ. ರೋಗ‌ ನಿರೋಧಕ ಶಕ್ತಿ ಕೊಡುತ್ತದೆ. -ಸ್ವರ್ಣವಲ್ಲೀ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next