Advertisement

ಮಕ್ಕಳಿಗೆ ಸಂಸ್ಕಾರ‌ ಕೊಡಿಸದಿದ್ದರೆ ಅಪಾಯ: ಸ್ವರ್ಣವಲ್ಲೀ ಶ್ರೀ

12:40 PM Nov 22, 2021 | Team Udayavani |

ಶಿರಸಿ: ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಸಂಸ್ಕ್ರತಿ ಕಲಿಸಬೇಕು. ನಮ್ಮ ಪರಂಪರೆ ತಿಳಿಸಬೇಕು. ಇಲ್ಲವಾದರೆ ಭವಿಷ್ಯಕ್ಕೆ ಅಪಾಯ ಎಂದು ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ‌ ಎವ್ಚರಿಸಿದರು.

Advertisement

ಅವರು ಸೋಂದಾ‌ ಸ್ವರ್ಣವಲ್ಲೀಯಲ್ಲಿ ನಡೆದ ಮಾತೆಯರ ಸಮಾವೇಶದಲ್ಲಿ ಸಾನ್ನಿಧ್ಯ ‌ನೀಡಿ ಆಶೀರ್ವಚನ ನೀಡಿದರು.

ಮಕ್ಕಳಿಗೆ ಸಂಸ್ಕಾರ ‌ಕಲಿಸದಿದ್ದರೆ ಭವಿಷ್ಯದಲ್ಲಿ ‌ಸಂಸಾರ ನಡೆಸುವದು ಕಷ್ಟವಾಗುತ್ತದೆ. ಈಚೆಗಿನ‌ ದಿನಗಳಲ್ಲಿ ವಿವಾಹ ವಿಚ್ಛೇಧನ‌ ಪ್ರಕರಣಗಳು ಹೆಚ್ಚಾಗುತ್ತಿದೆ‌. ಇದನ್ನು ತಡೆಯುವ ಶಕ್ತಿ ಮಾತೆಯರಿಗೆ‌ ಮಾತ್ರ ಇದೆ ಎಂದು ಶ್ರೀಗಳು‌ ಪ್ರತಿಪಾದಿಸಿದರು.

ಪ್ರತಿ‌ ನಿತ್ಯ ಪ್ರತಿ ಮನೆಗಳಲ್ಲಿ ಭಗವದ್ಗೀತೆಯ ಪಠಣ ಆಗಬೇಕು. ಗೀತೆ ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುತ್ತದೆ ಎಂದರು.

ವಿಭು ಅಕಾಡೆಮಿ ಅಧ್ಯಕ್ಷೆ ಡಾ| ಆರತಿ ವಿ.ಬಿ,‌ಭಾರತೀಯ‌ ಸಂಸ್ಕ್ರತಿ ಅತ್ಯಂತ ಶ್ರೇಷ್ಠವಾದದ್ದು. ಮೆಕಾಲೆ ಶಿಕ್ಷಣ ಎಲ್ಲವನ್ನೂ ಹಾಳು‌ ಮಾಡಿದೆ ಎಂದರು.

Advertisement

ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೂಪಾ ಭಟ್  ಮಾತನಾಡಿ, ಸುಸ್ಥಿರ ಆರೋಗ್ಯ ಪಾಲನೆ ಮಾಡಿದರೆ ನಿರೋಗಿಗಳಾಗಿ ಬದುಕಬಹುದು. ಮಾತೆ‌ ಮನಸ್ಸು ಮಾಡಿದರೆ ಇಡೀ‌ ಮನೆಯವರ ಆರೋಗ್ಯ ಕಾಪಾಡಬಹುದು ಎಂದರು.

ಮಠದ ಆಡಳಿಯ ಮಂಡಳಿಯ ಅಧ್ಯಕ್ಷ ವಿ.ಎನ್‌.ಹೆಗಡೆ‌ ಬೊಮ್ಮನಳ್ಳಿ, ಮಾತೃ ಮಂಡಳಿ ಸಂಚಾಲಕಿ‌ ಗೀತಾ ಜೋಶಿಉಪಸ್ಥಿತರಿದ್ದರು.

ಕೇಂದ್ರ ಮಾತೃ ಮಂಡಲದ ಅಧ್ಯಕ್ಷೆ  ಗೀತಾ ಆರ್ ಹೆಗಡೆ ಶೀಗೆಮನೆ ಸ್ವಾಗತಿಸಿದರು.  ಸುಜಾತಾ‌ ಹೆಗಡೆ ಕೊಡ್ನಗದ್ದೆ‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next