Advertisement

ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!

10:36 PM Jul 07, 2024 | Team Udayavani |

ನವದೆಹಲಿ: ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಆಫ್ರಿಕನ್‌ ಹಂದಿ ಜ್ವರ( African Swine Flu) ಉಲ್ಬಣಗೊಂಡ ಹಿನ್ನೆಲೆ ಯಲ್ಲಿ 310 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಡಕ್ಕತ ರನ್‌ ಗ್ರಾ.ಪಂ ವ್ಯಾಪ್ತಿಯಲ್ಲಿ ಹಂದಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ಹಂದಿಗಳಲ್ಲಿ ಕಾಣಿಸಿಕೊಂಡ ಜ್ವರ ಮಾನ ವರಿಗೆ ತಗುಲಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

Advertisement

ಆಫ್ರಿಕನ್‌ ಹಂದಿ ಜ್ವರವು ಮೊದಲಿಗೆ 2020ರಲ್ಲಿ ಈಶಾನ್ಯ ಭಾರತದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಬಳಿಕ, ದೇಶದ 24 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಪಿಸಿದೆ.

ಮಡಕ್ಕತರನ್‌ ಅನ್ನು ಕೇಂದ್ರವಾಗಿಟ್ಟು 10 ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ನಿಗಾ ಇಡಲಾಗಿದೆ. ರಾಜ್ಯದ ಅಧಿಕಾರಿಗಳೂ ತ್ವರಿತವಾಗಿ ಸ್ಪಂದಿಸಿದ್ದಾರೆ ಈ ಜ್ವರ ಪ್ರಾಣಿಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವಂ ಥದ್ದು. ಮಾನವರಿಗೆ ಹರಡುವುದಿಲ್ಲ ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆ ಹೇಳಿದೆ.

ಲಸಿಕೆಗಳ ಕೊರತೆ
ಎಎಸ್‌ಎಫ್ ಮಾನವರಿಗೆ ತಗಲೋ ಸಾಧ್ಯತೆ ಕಡಿಮೆಯಿದ್ದ ರೂ ಲಸಿಕೆಗಳ ಕೊರತೆಯ ಕಾರಣ ಪರಿಸ್ಥಿತಿ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಇದರ ಹತೋಟಿಗೆ 2020 ರಲ್ಲೇ ರಾಷ್ಟ್ರೀಯ ಕ್ರಿಯಾಯೋಜನೆಯನ್ನು ರೂಪಿಸಲಾ ಗಿದ್ದು, ಮಾರ್ಗದರ್ಶಿ ಸೂತ್ರಗಳನ್ನೂ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next