Advertisement
ವಸತಿ ರಹಿತ ಕುಟುಂಬಗಳಿಗೆ ಆಸರೆಯಾಗಲಿ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿ ಸ್ವಂತ ಜಾಗೆಯುಳ್ಳವರಿಗೆ ವಾಜಪೇಯಿ-ಡಾ| ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು 2.70 ಲಕ್ಷ ರೂ. ಹಾಗೂ ಎಸ್‌ಸಿ-ಎಸ್‌ಟಿಯವರಿಗೆ 3.70 ಲಕ್ಷ ರೂ. ಸಹಾಯಧನ ನೀಡುತ್ತದೆ. ಆದರೆ ಇದು ಹೆಸರಿಗೆ ಮಾತ್ರ. ಫಲಾನುಭವಿಗಳು ಹಣ ಮಂಜೂರಾತಿಗೆ ವರ್ಷಪೂರ್ತಿ ಕಾಯುವಂತಾಗಿದೆ.
Related Articles
Advertisement
ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ : 2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಮನೆ ಕಟ್ಟಲು ಆದೇಶ ಬಂದಿತ್ತು. ಆದರೆ ಇನ್ನೂ 1.50 ಲಕ್ಷ ರೂ. ಬರಬೇಕಾಗಿದೆ. ಸರಕಾರ ನೀಡುವ ಹಣ ಬರಬಹುದೆಂಬ ಆಸೆಯಿಂದ ಸಾಲ ಮಾಡಿ ಮನೆ ಪೂರ್ತಿಗೊಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದ್ದೇನೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದೇನೆ. ಯಾರಿಂದಲೂ ಸ್ಪಂದನೆ ಇಲ್ಲ. ಪುರಸಭೆ ಅಧಿಕಾರಿಗಳು ಮಂಜೂರಾದ ಹಣವನ್ನು ನೀಡಿದ್ದೇವೆ, ಉಳಿದ ಹಣವನ್ನು ಸರಕಾರದಿಂದ ಮಂಜೂರಾದ ಮೇಲೆ ಕೊಡಲಾಗುವುದೆಂದು ಹೇಳಿದ್ದಾರೆ. ನಾನೊಬ್ಬ ಕಾರ್ಮಿಕನಾಗಿದ್ದು, ಇತ್ತ ಕೊರೊನಾದಿಂದ ದುಡಿಯಲು ಕೆಲಸವಿಲ್ಲ. ಮನೆಗಾಗಿ ಮಾಡಿದ ಸಾಲಕ್ಕೆ ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆಶ್ರಯ ಪ್ಲಾಟ್ ಫಲಾನುಭವಿ ಲಕ್ಷ್ಮಣ ಹನಮಂತಪ್ಪ ಶಿಂಧೆ ಅಳಲು ತೋಡಿಕೊಂಡರು.
2017-18ರಿಂದ ವಸತಿ ಯೋಜನೆಯಲ್ಲಿ ಮಂಜೂರಾತಿ ನೀಡಿದವರಿಗೆ ಅತಿವೃಷ್ಟಿ, ಕೋವಿಡ್ ದಿಂದ ಸರಕಾರದಿಂದ ಅನುದಾನ ಮಂಜೂರಾಗಿಲ್ಲ. ಸರಕಾರದಿಂದ ಅನುದಾನ ಬರುವವರಿಗೂ ಫಲಾನುಭವಿಗಳು ಕಾಯಬೇಕು. ಎನ್.ಎಚ್. ಖುಂದಾನವರ, ಪುರಸಭೆ ಮುಖ್ಯಾಧಿಕಾರಿ
2019ರಲ್ಲಿ ಆಯ್ಕೆಯಾದ 150 ಬಡ ಕುಟುಂಬದ ಫಲಾನುಭವಿಗಳಿಗೆ ಒಂದು ವರ್ಷವಾದರೂ ಮಂಜೂರಾತಿ ದೊರೆತಿಲ್ಲ. ಸರಕಾರ ವಸತಿ ಯೋಜನೆಯಲ್ಲಿ ಕಷ್ಟಪಡುತ್ತಿರುವ ಬಡವರನ್ನು ನೋಡುತ್ತಿಲ್ಲ. ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಂಡವರು ಅನುದಾನ ಬರದೆ ತೊಂದರೆ ಅನುಭವಿಸುತ್ತಿದ್ದಾರೆ. ಮಂಜು ಜಾಧವ, ಪುರಸಭೆ ಸದಸ್ಯ
–ಪುಂಡಲೀಕ ಮುಧೋಳೆ