Advertisement

ಡಾ. ಶಿವಮೂರ್ತಿ ಮುರುಘಾ ಶರಣರಿಂದ ಅಸಂಖ್ಯ ಪ್ರಥಮರ ಗಣಮೇಳಕ್ಕೆ ಚಾಲನೆ

09:42 AM Feb 17, 2020 | keerthan |

ಬೆಂಗಳೂರು: ಇಲ್ಲಿನ ನಂದಿ ಗ್ರೌಂಡ್ ನಲ್ಲಿ ನಡೆಯುತ್ತಿರುವ ಅಸಂಖ್ಯ ಪ್ರಥಮರ ಗಣಮೇಳಕ್ಕೆ ಚಾಲನೆ ದೊರೆತಿದೆ. ಬೆಳಗ್ಗೆ 8 ಗಂಟೆಗೆ ಗಣಮೇಳ ಕಾರ್ಯಕ್ರಮಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

Advertisement

ಬಿಜೆಪಿ ಯುವಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಉಪಸ್ಥಿತರಿದ್ದರು. ಗಣಮೇಳದಲ್ಲಿ ನೂರಾರು ಸ್ವಾಮೀಜಿಗಳು ಭಾಗಿಯಾಗಿದ್ದಾರೆ.

ಕರ್ನಾಟಕ ವಿವಿಧ ಭಾಗದಿಂದ 50 ಸಾವಿರರಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ. ಪ್ರಮುಖವಾಗಿ ದಾವಣಗೆರೆ, ಚಿತ್ರದುರ್ಗ ಭಾಗದಿಂದ ನೂರಾರು ಬಸ್ ಗಳಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಧಜ್ವಾರೋಹಣ ಬಳಿಕ ಮಾತನಾಡಿದ, ಡಾ ಶಿವಮೂರ್ತಿ ಮುರುಘಾಶರಣರು, ಎಲ್ಲಾ ಸ್ವಾಮೀಜಿಗಳು ಸೇರಿಕೊಂಡರೆ ಗಣ. ಈ ಗಣಕ್ಕೆ ಭಕ್ತರು ಕೂಡಿದರೆ ಅಮರಗಣವಾಗಲಿದೆ. 21ನೇ ಶತಮಾನವನ್ನು 12ನೇ ಶತಮಾನವನ್ನಾಗಿ ಪರಿವರ್ತಿಸುವ ಪ್ರಯತ್ನವೇ ಈ ಗಣಮೇಳವಾಗಿದೆ. ಆಧುನಿಕ‌ ಜಗತ್ತು ಆಪತ್ತು ಹಾಗೂ ಅವಸರ ಜಗತ್ತು. ಎಲ್ಲರ ಅವಸರದಲ್ಲಿಯೂ ಬೇಸರವಿದೆ, ಆತಂಕವಿದೆ. ಇದಕ್ಕೆ ಪರಿಹಾರವಾಗಿ ಆಧ್ಯಾತ್ಮಿಕ ಯಾನವನ್ನು ಆರಂಭಿಸಿದ್ದೇವೆ. ಈ ಯಾನಕ್ಕೆ ಒಳಗಾಗದಿದ್ದರೆ ಅವಾಂತರ ಅನಾಹುತಗಳು, ಅವ್ಯವಸ್ಥೆಗಳು, ಅಶಾಂತಿ ಎದುರಿಸಬೇಕಾಗುತ್ತದೆ ಎಂದರು.

Advertisement

ಶಿವಯೋಗ, ಧ್ಯಾನ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು ಬಸವಾದಿ ಶರಣರು. ಧ್ಯಾನ ಪರಂಪರೆಯನ್ನ ಮುಂದುವರೆದಿದ್ದಲ್ಲಿ ಅವಗಡಗಳನ್ನ ಎದುರಿಸಬೇಕಾಗುತ್ತದೆ. ಪರಿಣಾಮಕಾರಿಯಾಗಿ ಧ್ಯಾನ ಮಾಡುವವರ ವರ್ತನೆ ಸಮತೋಲನದ ಸ್ಥಿತಿಗೆ ಬರುತ್ತದೆ. ಜೊತೆಗೆ ಇಂದ್ರೀಯ ಮತ್ತು ಬುದ್ಧಿಯ ನಡುವೆ ಸಮತೋಲನ ಸಾಧ್ಯವಾಗುತ್ತದೆ.  ಈ ಸಮತೋಲನ ಸಾಧಿಸುವುದೇ ನಿಜವಾದ ಸಿದ್ಧಿ. ಸಿದ್ಧಿಯಿಂದ ಶುದ್ಧಿ ಪ್ರಾಪ್ತವಾಗುತ್ತದೆ. ಶುದ್ಧಿ ಹಾಗೂ ಸಿದ್ಧಿ ಇರುವೆಡೆ ಸದ್ಬುದ್ಧಿ ಇರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next