Advertisement
ಶ್ರಾವಣ ಮಾಸದ ವಿಶೇಷ ಪೂಜೆಗಳಂದು ಅಡುಗೆ ತಯಾರಿಸುವಾಗ, ಈರುಳ್ಳಿ-ಬೆಳ್ಳುಳ್ಳಿಯ ಬದಲಾಗಿ ಇಂಗು ಉಪಯೋಗಿಸುವ ವಾಡಿಕೆಯಿದೆ. ತೀಕ್ಷ್ಣ, ಕಟು ಗುಣವುಳ್ಳ, ಪರಿಮಳಯುಕ್ತ ಇಂಗು, ವಾತ-ಕಫಗಳನ್ನು ಶಮನಗೊಳಿಸಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಚಿಕ್ಕಮಕ್ಕಳಲ್ಲಿ ಅಜೀರ್ಣ, ಹೊಟ್ಟೆಯುಬ್ಬರ, ಭೇದಿ ಕಾಣಿಸಿಕೊಂಡಾಗ ಇಂಗನ್ನು ಬಿಸಿನೀರಿನಲ್ಲಿ ಕದಡಿ ಅಥವಾ ಮಜ್ಜಿಗೆಯಲ್ಲಿ ಕದಡಿ ಕುಡಿಸಬಹುದು. ನೆಗಡಿ, ಅಸ್ತಮಾ, ಫೂ ಜ್ವರಗಳಿಗೂ ಇಂಗು ಉತ್ತಮ ಮನೆಮದ್ದು. ಇಷ್ಟೆಲ್ಲಾ ಔಷಧೀಯ ಗುಣ ಹೊಂದಿರುವ ಇಂಗು, ಸೌಂದರ್ಯವರ್ಧಕವೂ ಹೌದು. ಚಿಟಿಕೆ ಇಂಗನ್ನು ಒಗ್ಗರಣೆಗಷ್ಟೇ ಅಲ್ಲ, ತ್ವಚೆಯ ಕಾಂತಿವರ್ಧನೆಗೂ ಬಳಸಬಹುದು ಅನ್ನೋದು ಗೊತ್ತಿದೆಯಾ?
2. ಕಡಲೆಹಿಟ್ಟು, ಬಟಾಣಿ ಹಿಡ್ಡಿನ ಮಿಶ್ರಣಕ್ಕೆ ಸ್ವಲ್ಪ ಇಂಗಿನ ಹುಡಿ ಬೆರೆಸಿ ಮುಖಕ್ಕೆ ಲೇಪಿಸಿದರೆ ಮುಖದ ಚರ್ಮ ಬಿಳಿಯಾಗುವುದಲ್ಲದೆ, ನೆರಿಗೆಗಳೂ ನಿವಾರಣೆಯಾಗುತ್ತದೆ.
3. ಇಂಗಿನ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದು ನಿಲ್ಲುತ್ತದೆ.
4. ಒಂದು ಬೌಲ್‌ನಲ್ಲಿ ಮುಲ್ತಾನಿ ಮಿಟ್ಟಿ , ಜೇನು ಹಾಗೂ ರೋಸ್‌ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ಅದಕ್ಕೆ 3 ಚಿಟಿಕೆ ಇಂಗು ಬೆರೆಸಿ ಮುಖಕ್ಕೆ ಲೇಪಿಸಿ, 10-15 ನಿಮಿಷದ ಬಳಿಕ ತೊಳೆದರೆ ತ್ವಚೆಯ ಕಾಂತಿ ಹೆಚ್ಚುತ್ತದೆ. -ಡಾ. ಅನುರಾಧಾ ಕಾಮತ್