Advertisement

“ಕಾಮ’ನಬಿಲ್ಲಿನ ಬಣ್ಣಗಳ ಮೇಲೆ ಸೌದಿ ಕೆಂಗಣ್ಣು! ಅಷ್ಟಕ್ಕೂ ಈ ಬಣ್ಣಗಳ ಮೇಲೇಕೆ ದ್ವೇಷ?

11:44 PM Jun 16, 2022 | Team Udayavani |

ಸೌದಿ : ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿನ ಎಲ್ಲ ಅಂಗಡಿಗಳು, ಶಾಪಿಂಗ್‌ ಮಾಲ್‌ಗ‌ಳ ಮೇಲೆ ಸ್ಥಳೀಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಲ್ಲಿರುವ “ಕಾಮ’ನಬಿಲ್ಲಿನ ಬಣ್ಣಗಳಿರುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Advertisement

ಯಾವ್ಯಾವ ಸೊತ್ತುಗಳ ವಶ?
ಕಾಮನಬಿಲ್ಲಿನ ಎಲ್ಲ ಬಣ್ಣಗಳಿರುವ ಅಲಂಕಾರಿಕ ವಸ್ತುಗಳು, ಬಟ್ಟೆ, ಟೋಪಿ, ವಿದ್ಯಾರ್ಥಿಗಳ ಸಾಮಗ್ರಿಗಳು, ಯುವ ಜನರಿಗಾಗಿಯೇ ವಿನ್ಯಾಸಗೊಳಿಸಲಾಗಿರುವಂಥ ವಸ್ತುಗಳು, ಕ್ರೀಡಾ ಸಾಮಗ್ರಿಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಸರಕಾರ ಹೇಳುವುದೇನು?
“ಕಾಮನಬಿಲ್ಲಿನ ಎಲ್ಲ ಬಣ್ಣಗಳಿರುವ ಧ್ವಜವನ್ನು ಸಲಿಂಗ ಕಾಮಿಗಳು ತಮ್ಮ ಆತ್ಮವಿಶ್ವಾಸ, ಘನತೆಯ ಪ್ರತೀಕವಾಗಿ ಬಳಸುತ್ತಾರೆ. ಈ ಬಣ್ಣಗಳಿರುವ ವಸ್ತುಗಳು ಮಕ್ಕಳು, ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಬಹುದು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ’ ಎಂದು ಸರಕಾರ ತಿಳಿಸಿದೆ.

ಬಣ್ಣಗಳ ಮೇಲೇಕೆ ದ್ವೇಷ?
1969ರ ಜೂ. 28ರಿಂದ ಜು. 3ರ ವರೆಗೆ ನ್ಯೂಯಾರ್ಕ್‌ನ ಸ್ಟೋನ್‌ವಾಲ್‌ ಇನ್‌° ಎಂಬ ಪ್ರಾಂತ್ಯದಲ್ಲಿ ಸಲಿಂಗಿಗಳು ಹಾಗೂ ಸ್ಥಳೀಯ ಪೊಲೀಸರ ನಡುವೆ ಘರ್ಷಣೆಗಳು ನಡೆದಿದ್ದವು. ಈ ದಂಗೆಯಲ್ಲಿ ಭಾಗಿಯಾಗಿದ್ದ ಸಲಿಂಗಿಗಳಿಗೆ ಗೌರವ ಸಲ್ಲಿಸಲು 1978ರಲ್ಲಿ ಗಿಲ್ಬರ್ಟ್‌ ಬ್ಲಾಕ್‌ ಎಂಬ ಸಲಿಂಗಿ ಕಲಾವಿದ ಕಾಮನಬಿಲ್ಲಿನ ಎಲ್ಲ ಬಣ್ಣಗಳಿರುವ ಧ್ವಜವನ್ನು ವಿನ್ಯಾಸಗೊಳಿಸಿ, ಅಭಿಯಾನ ನಡೆಸಿದ್ದ. ಇದು ಜಗತ್ತಿನ ಎಲ್ಲ ಸಲಿಂಗಿಗಳೂ ತಮ್ಮ ಆತ್ಮವಿಶ್ವಾಸದ ಪ್ರತೀಕವೆಂಬಂತೆ ಈ ಧ್ವಜವನ್ನು ಬಳಸುತ್ತಾ ಬಂದಿದ್ದಾರೆ. ಹಾಗಾಗಿ ಸೌದಿ ಸೇರಿದಂತೆ ಇನ್ನಿತರ ಸಾಂಪ್ರದಾಯಿಕ ರಾಷ್ಟ್ರಗಳು ಈ ಬಣ್ಣಗಳಿರುವ ವಸ್ತುಗಳ ಮೇಲೆ ಕೆಂಗಣ್ಣು ಬೀರಿವೆ.

Advertisement

Udayavani is now on Telegram. Click here to join our channel and stay updated with the latest news.

Next