Advertisement

World Cup ಸಮೀಪಿಸುತ್ತಿರುವ ಹೊತ್ತಿನಲ್ಲೇ ಪ್ರಭುತ್ವ ಸ್ಥಾಪಿಸಲು ಹೊರಟ ಆಸ್ಟ್ರೇಲಿಯ

11:37 PM Sep 10, 2023 | Team Udayavani |

ಬ್ಲೋಮ್‌ಫಾಂಟೀನ್‌: ಮತ್ತೊಂದು ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಸ್ಟ್ರೇಲಿಯ ತನ್ನ ಪ್ರಭುತ್ವ ಸ್ಥಾಪಿಸಲು ಹೊರಟ ಸೂಚನೆಯೊಂದು ಕಂಡುಬರುತ್ತಿದೆ. ದಕ್ಷಿಣ ಆಫ್ರಿಕಾ ಮೇಲೆ ಅವರದೇ ಅಂಗಳದಲ್ಲಿ ಸವಾರಿ ಮಾಡಲಾರಂಭಿಸಿದೆ. ದ್ವಿತೀಯ ಏಕದಿನ ಪಂದ್ಯವನ್ನು 123 ರನ್ನುಗಳ ಭಾರೀ ಅಂತರದಿಂದ ಜಯಿಸಿ, 2-0 ಮುನ್ನಡೆ ಸಾಧಿಸುವ ಮೂಲಕ ಕಾಂಗರೂ ಪಡೆ ತನ್ನ ಪರಾಕ್ರಮ ಮೆರೆದಿದೆ.

Advertisement

ಬ್ಲೋಮ್‌ಫಾಂಟೀನ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 8 ವಿಕೆಟಿಗೆ 392 ರನ್‌ ರಾಶಿ ಹಾಕಿತು. ಇದು ಕಾಂಗರೂ ತಂಡದ 3ನೇ ಗರಿಷ್ಠ ಮೊತ್ತ. ಜವಾಬಿತ್ತ ದಕ್ಷಿಣ ಆಫ್ರಿಕಾ 8.1 ಓವರ್‌ ಉಳಿದಿರುವಾಗಲೇ 269ಕ್ಕೆ ಆಲೌಟ್‌ ಆಯಿತು.

ಇದು 5 ಪಂದ್ಯಗಳ ಸರಣಿಯಾಗಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯ 3 ವಿಕೆಟ್‌ಗಳಿಂದ ಗೆದ್ದಿತ್ತು. ಇದಕ್ಕೂ ಹಿಂದಿನ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿತ್ತು.

ವಾರ್ನರ್‌ ಮತ್ತು ಮಾರ್ನಸ್‌ ಲಬುಶೇನ್‌ ಅವರ ಶತಕ ಆಸ್ಟ್ರೇಲಿಯದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು. ವಾರ್ನರ್‌ 93 ಎಸೆತಗಳಿಂದ 106 ರನ್‌ ಬಾರಿಸಿದರೆ (12 ಬೌಂಡರಿ, 3 ಸಿಕ್ಸರ್‌), ಲಬುಶೇನ್‌ 99 ಎಸೆತ ಎದುರಿಸಿ 124 ರನ್‌ ಹೊಡೆದರು (19 ಬೌಂಡರಿ, 1 ಸಿಕ್ಸರ್‌). ಆಸ್ಟ್ರೇಲಿಯದ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗದ ಲಬುಶೇನ್‌ ಈ ಎರಡೂ ಪಂದ್ಯಗಳ ಗೆಲುವಿನ ರೂವಾರಿ ಎಂಬುದನ್ನು ಮರೆಯುವಂತಿಲ್ಲ. ಮೊದಲ ಮುಖಾಮುಖೀಯ ವೇಳೆ ಬದಲಿ ಆಟಗಾರನಾಗಿ, 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಬುಶೇನ್‌ ಅಜೇಯ 80 ರನ್‌ ಬಾರಿಸಿ ಆಸ್ಟ್ರೇಲಿಯವನ್ನು ಯಶಸ್ವಿಯಾಗಿ ದಡ ಸೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next