ಕೋರ್ಟ್‌ನಲ್ಲಿ ವಾದ ಮಂಡಿಸಿದೆ.
Advertisement
ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ರಾಮಜನ್ಮಭೂಮಿ ವಿವಾದ ಪ್ರಕರಣದ ದಿನಂಪ್ರತಿ ವಿಚಾರಣೆ ಬುಧವಾರ 9ನೇ ದಿನಕ್ಕೆ ಕಾಲಿಟ್ಟಿತು. ದಿನದ ವಿಚಾರಣೆಯಲ್ಲಿ ಪ್ರಕರಣದ ಪ್ರತಿವಾದಿಯಾಗಿರುವ ರಾಮಲಲ್ಲಾ ಸಂಸ್ಥೆಯ ವಕೀಲರು, ರಾಮನು ಜನಿಸಿದ ಕೂಡಲೇ ಆ ಜಾಗಕ್ಕೆ ದೈವತ್ವದ ಮಾನ್ಯತೆ ಸಿಕ್ಕಂತೆಯೇ ಸರಿ. ಹಾಗಾಗಿಯೇ, ಸಹಸ್ರಾರು ವರ್ಷಗಳಿಂದ ಹಿಂದೂಗಳು ಆ ಜಾಗದಲ್ಲಿ ರಾಮನ ಆರಾಧನೆ ಮಾಡಿಕೊಂಡು ಬಂದಿದ್ದು ಅದು ಅವರ ಹಕ್ಕೂ ಆಗಿದೆ ಎಂದರು. ಇದನ್ನು ಬೆಂಬಲಿಸಿದ ರಾಮಲಲ್ಲಾ ಸಂಸ್ಥೆಯ ಮತ್ತೂಬ್ಬ ವಕೀಲ ಸಿ.ಎಸ್. ವೈದ್ಯನಾಥನ್, ದೈವತ್ವದ ಸ್ಥಳದ ಮೇಲೆ ನಿರ್ಮೋಹಿ ಅಖಾಡವಾಗಲೀ, ಯಾವುದೇ ಮುಸ್ಲಿಂ ಪಂಗಡವಾಗಲೀ ಅಧಿಕಾರ ಹೊಂದಿರುವುದಿಲ್ಲ. ಆ ಸ್ಥಳ ನಮ್ಮದು ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದರು.