Advertisement

ಪ್ರಜನನ ಶಾಸ್ತ್ರ -ಸುಶೃತನು ಕಂಡಂತೆ ಕೃತಿ ಬಿಡುಗಡೆ

12:36 PM Mar 31, 2017 | Team Udayavani |

ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಕುತ್ಪಾಡಿ ಉಡುಪಿ ಇದರ ಮಹಿಳಾ ಕ್ಷೇಮಾಭಿವೃದ್ಧಿ ಘಟಕದ ವತಿಯಿಂದ ಜರಗಿದ ಸೋದರಿ ನಿವೇದಿತಾ ಅವರ 150ನೇ ಜಯಂತಿಯ ಸಂದರ್ಭದಲ್ಲಿ ಕೆಎಂಸಿ ಮಂಗಳೂರಿನ ಪ್ರಜನನ ಶಾಸ್ತ್ರ ವಿಭಾಗದ ಖ್ಯಾತ ತಜ್ಞ ಡಾ| ಪ್ರಹ್ಲಾದ ಕುಷ್ಟಗಿ ಅವರು ಅನುವಾದಿಸಿದ  “ಪ್ರಜನನ ಶಾಸ್ತ್ರ – ಸುಶೃತನು ಕಂಡಂತೆ’ ಕೃತಿಯ ಬಿಡುಗಡೆ ಸಮಾರಂಭ ಮಹಾವಿದ್ಯಾಲಯದ ಭಾವಪ್ರಕಾಶ ಸಭಾಂಗಣದಲ್ಲಿ  ನಡೆಯಿತು.

Advertisement

ಉಡುಪಿ ಸರಕಾರಿ ಆಸ್ಪತ್ರೆಯ ನಿವೃತ್ತ ಪ್ರಸೂತಿ ತಜ್ಞೆ ಡಾ| ಸಾವಿತ್ರಿ ದೈತೋಟ ಕೃತಿಯನ್ನು ಬಿಡುಗಡೆಗೊಳಿಸಿದರು.ಕೃತಿಯ ಅನುವಾದಕ ಡಾ| ಪ್ರಹ್ಲಾದ ಕುಷ್ಟಗಿ ಮಾತನಾಡಿ, ಆಧುನಿಕ ವೈದ್ಯ ಪದ್ಧತಿಯಲ್ಲಿ ಇರುವ ಪ್ರಜನನ ಶಾಸ್ತ್ರದ ಕುರಿತು ಸಾವಿರಾರು ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರದಲ್ಲಿ ವಿವರಿಸಿದೆ. ಇಂದಿನ ಯುವವೈದ್ಯರಿಗೆ ಈ ಕೃತಿ ದಾರಿದೀಪವಾಗಲಿ ಎಂದು ಹೇಳಿದರು.

ಕಾಲೇಜಿನ ಉಪಪ್ರಾಂಶುಪಾಲ ಡಾ| ಪ್ರಭಾಕರ ಯು. ರೆಂಜಾಳ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಜಾದೂಗಾರ ಪ್ರೊ| ಶಂಕರ್‌ ಮೊದಲಾದವರು  ಉಪಸ್ಥಿತರಿದ್ದರು. 

ಕಾಲೇಜಿನ ಮಹಿಳಾ ಕ್ಷೇಮಾಭಿವೃದ್ಧಿ ಘಟಕದ ಅಧ್ಯಕ್ಷೆ ಡಾ| ಮಮತಾ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಲಿಖೀತಾ ಡಿ. ಎನ್‌. ಹಾಗೂ ಡಾ| ಹರ್ಷಿತಾ ಎಂ. ಎಸ್‌. ಕಾರ್ಯಕ್ರಮ ನಿರ್ವಹಿಸಿದರು. ಡಾ| ಚೇತನಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next