Advertisement

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಜ್ಞಾನ ಶಾಖೆ ಆಯಾಮ ಬದಲು

05:50 PM Dec 03, 2022 | Team Udayavani |

ಧಾರವಾಡ: ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳಲ್ಲೊಂದಾದ ಯಾಂತ್ರಿಕ ಬುದ್ಧಿಮತ್ತೆ ಗಣಕ ವಿಜ್ಞಾನದ ಭಾಗವಾಗಿ ಬೆಳೆದುಬಂದಿದೆ. ಇದನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡು ಜ್ಞಾನ ವಿಕಾಸದ ಹೊಸ ಆಯಾಮಗಳತ್ತ ಸಾಗಬೇಕಾಗಿದೆ ಎಂದು ಡಾ| ಸಿ.ಕೃಷ್ಣಮೂರ್ತಿ ಹೇಳಿದರು.

Advertisement

ಕವಿವಿ ಹಾಗೂ ಜೆಎಸ್ಸೆಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಸಹಯೋಗದಲ್ಲಿ ಜೆಎಸ್ಸೆಸ್‌ ಉತ್ಸವ ಸಭಾಭವನದಲ್ಲಿ ಆಯೋಜಿಸಿದ್ದ ಯಾಂತ್ರಿಕ ಬುದ್ಧಿಮತ್ತೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗಣಕ ವಿಜ್ಞಾನದ ಬಳಕೆ- ಸದುಪಯೋಗ ಮಾಡಿಕೊಳ್ಳುವಲ್ಲಿ ಇಡೀ ಜಗತ್ತು ಮಾಹಿತಿ ತಂತ್ರಜ್ಞಾನದಲ್ಲಿ ತುಂಬಾ ಪ್ರಗತಿಯಲ್ಲಿದೆ. ಆರೋಗ್ಯ, ಶಿಕ್ಷಣ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರದಲ್ಲಿ ಮತ್ತು ನಿತ್ಯ ಜೀವನದೊಂದಿಗೆ ತಂತ್ರಜ್ಞಾನದ ಬಳಕೆ ಹಾಸುಹೊಕ್ಕಾಗಿದೆ. ಇದು ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ ಎಂದರು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಅಧಿಕಾರಿ ಡಾ| ಎಂ.ಜಯಪ್ಪ ಮಾತನಾಡಿ, ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮೊದಲು ಜಾರಿಗೆ ತಂದಿದ್ದು ಕರ್ನಾಟಕ. ಕರ್ನಾಟಕದಲ್ಲಿ ಎನ್‌ಇಪಿ ಅಡಿಯಲ್ಲಿ ಇಂತಹ ಕಾರ್ಯಾಗಾರವನ್ನು ಮೊಟ್ಟಮೊದಲ ಬಾರಿಗೆ ಆಯೋಜಿಸಿದ್ದು ಕವಿವಿ. ಕವಿವಿ ಅಡಿಯಲ್ಲಿ ಮೊಟ್ಟಮೊದಲು ಜೆಎಸ್ಸೆಸ್‌ ಸಂಸ್ಥೆಯಲ್ಲಿ ಯಶಸ್ವಿಯಾಗಿ ಇಂತಹ ಕಾರ್ಯಗಾರವನ್ನು ಆಯೋಜಿಸಿರುವುದು ಸ್ಮರಣಿಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ| ಅಜಿತ ಪ್ರಸಾದ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್‌ ಜ್ಞಾನ ಅತಿ ಅವಶ್ಯ. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಜ್ಞಾನ ಶಾಖೆಯ ಆಯಾಮಗಳು ಬದಲಾಗುತ್ತಾ ಹೋಗುತ್ತವೆ. ಜ್ಞಾನ ಸದಾ ಹೊಸದನ್ನು ಸೃಷ್ಟಿಸುತ್ತಾ ಹೋಗುತ್ತದೆ. ನಾವು ಅದನ್ನು ಕಲಿಯುತ್ತಾ ಹೋಗಬೇಕು.

Advertisement

ಅದರಲ್ಲೂ ಪ್ರಾಧ್ಯಾಪಕರು ನಿತ್ಯ ಅಧ್ಯಯನಶೀಲರಾಗಿ ಜ್ಞಾನ, ತಂತ್ರಜ್ಞಾನದ ಸಾಮಾನ್ಯ ತಿಳಿವಳಿಕೆ ಹೊಂದುವುದು ತುಂಬಾ ಮುಖ್ಯ ಎಂದರು. ಡಾ| ಸೂರಜ್‌ ಜೈನ್‌, ದಿನೇಶ ಕುಮಾರ ಪಾಣಿಗ್ರಾಹಿ, ಕರಣ ಠಾಕೂರ, ಡಾ| ರಶ್ಮಿ ಠಾಕೂರ ಉಪಸ್ಥಿತರಿದ್ದರು. ಚೈತ್ರಾ ಭಟ್‌ ಪ್ರಾರ್ಥಿಸಿದರು. ಡಾ| ಬಿ.ಬಿ. ಬಿರಾದಾರ ಸ್ವಾಗತಿಸಿದರು. ಡಾ| ವಿಷ್ಣುವರ್ಧನ ಪರಿಚಯಿಸಿದರು. ಪ್ರೊ| ವಿವೇಕ ಲಕ್ಷ್ಮೇಶ್ವರ ವಂದಿಸಿದರು. ಪ್ರೊ| ಪ್ರವೀಣ ಕೊರಳಹಳ್ಳಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next