Advertisement

ಶೋಷಣೆ ಮುಕ್ತ ಸಮಾಜಕ್ಕಾಗಿ ಒಂದಾಗಿ

07:55 PM May 02, 2021 | Adarsha |

ವಿಜಯಪುರ: ಶೋಷಣೆ ಮುಕ್ತಸಮಾಜ ನಿರ್ಮಾಣಕ್ಕಾಗಿ ವಿಶ್ವದಎಲ್ಲ ಕಾರ್ಮಿಕರು ಒಗ್ಗಟ್ಟಾಗಬೇಕಿದೆ.ರೈತ ಚಳವಳಿಗಳು ಇನ್ನೂಚುರುಕು ಪಡೆಯಬೇಕು ಎಂದುಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷಕೆ.ವಿ.ಭಟ್‌ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಎಐಯುಟಿಯುಸಿಕಾರ್ಮಿಕ ಸಂಘಟನೆ ಕಚೇರಿಯಲ್ಲಿಕಾರ್ಮಿಕರ ದಿನಾಚರಣೆ ಅಂಗವಾಗಿಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಧ್ವಜಾರೋಹಣ ನೆರವೇರಿಸಿ ಹುತಾತ್ಮಸ್ಥಂಭಕ್ಕೆ ಮಾಲಾರ್ಪಣೆ ಮಾಡಿಗೂಗಲ್‌ ಮೀಟ್‌ನಲ್ಲಿ ಮಾತನಾಡಿದ ಅವರು, ವಿಶ್ವದ ಕಾರ್ಮಿಕರೇಒಂದಾಗುವುದು ಹಿಂದಿಗಿಂತ ಇಂದು ಜರೂರಾಗಿದೆ.

ಶೋಷಣೆ ರಹಿತಸಮಾಜ ನಿರ್ಮಿಸುವುದಕ್ಕಾಗಿ ಕೃಷಿಕರು,ಕಾರ್ಮಿಕರು ಒಗ್ಗೂಡಿ ರಾಜಿ ರಹಿತಹೋರಾಟಕ್ಕೆ ಇಳಿಯಬೇಕಿದೆ. ಕೃಷಿ-ರೈತವಿರೋಧಿ ಜಾರಿಗೆ ತಂದಿರುವ ಕೇಂದ್ರಸರ್ಕಾರದ ವಿರುದ್ಧ ದೆಹಲಿಯಲ್ಲಿ 150ದಿನಗಳಿಂದ ರೈತರು ನಡೆಸುತ್ತಿರುವರಾಜಿರಹಿತ ಹೋರಾಟ ತಾರ್ಕಿಕ ಅಂತ್ಯಕ್ಕೆಹೋಗಬೇಕಿದೆ ಎಂದು ಆಶಿಸಿದರು.

ಆಳುವ ಸರ್ಕಾರಗಳ ಬೇಜವಾಬ್ದಾರಿವರ್ತನೆಯಿಂದಾಗಿ ದೇಶದಾದ್ಯಂತಕೊರೊನಾ ಸೋಂಕು ಎರಡನೇಅಲೆ ಸುನಾಮಿಯಂತೆ ಅಪ್ಪಳಿಸಿದೆ.ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸಹಯಾವುದೇ ಪೂರ್ವ ಸಿದ್ಧತೆ ಇಲ್ಲದೇಕರ್ಫ್ಯೂ ಹೇರಿ ಅಮಾಯಕ ಜನರನ್ನುಬಲಿಪಶು ಮಾಡುತ್ತಿದೆ.

ರೋಗಿಗಳಿಗೆಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ, ಆಕ್ಸಿಜನ್‌ಅಲಭ್ಯತೆಯಂಥ ಆರೋಗ್ಯ ಇಲಾಖೆಯಲೋಪಗಳಿಂದ ಸೋಂಕಿತರುಬೀದಿಗಳಲ್ಲಿ ಸಾಯುತ್ತಿರುವ ದೃಶ್ಯಹೃದಯ ವಿದ್ರಾವಕವಾಗಿದ್ದರೂಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ ಎಂದುಕಿಡಿ ಕಾರಿದರು.

Advertisement

ಎಲ್ಲ ವೈಫಲ್ಯಕ್ಕೂ ದಿವ್ಯ ಔಷಧಎಂಬಂತೆ ಇದೀಗ ರಾಜ್ಯ ಸರ್ಕಾರಎರಡನೇ ಬಾರಿ ಕರ್ಫ್ಯೂ ಹೆಸರಿನಲ್ಲಿಲಾಕ್‌ಡೌನ್‌ ಘೋಷಿಸಿ ಕೈಚೆಲ್ಲಿದೆ.ಇದಕ್ಕೆ ಬಲಿಪಶು ಆಗಿರುವುದುದೈನಂದಿನ ಕೂಲಿಗೆ, ಅನ್ನಕ್ಕೆ ಪರಿತಪಿಸುವಕಾರ್ಮಿಕರು.

ಈ ಬಾರಿ ಯಾರಿಗೂಯಾವುದೇ ಕೋವಿಡ್‌ ಪರಿಹಾರವನ್ನುಘೋಷಿಸಿದ ರಾಜ್ಯ ಸರ್ಕಾರದನಿಲುವನ್ನು ಕಾರ್ಮಿಕ ಸಂಘಟನೆತೀವ್ರವಾಗಿ ಖಂಡಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘಟನೆಯಜಿಲ್ಲಾಧ್ಯಕ್ಷ ಎಚ್‌.ಟಿ.ಮಲ್ಲಿಕಾರ್ಜುನ,ಬೆಲೆ ಏರಿಕೆಯ ದುಬಾರಿ ಈದಿನಗಳಲ್ಲಿ ರಾಜ್ಯ ಸರಕಾರ ಕರ್ಫ್ಯೂಹೆಸರಿನಲ್ಲಿ ಹೇರಿದ ಲಾಕ್‌ಡೌನ್‌ದುಡಿಯುವ ವರ್ಗದ ಜನರಬದುಕನ್ನು ಹೈರಾಣಾಗಿಸಿದೆ.

ಎಲ್ಲಕ್ಷೇತ್ರದ ಸಂಘಟಿತ ಮತ್ತು ಅಸಂಘಟಿತಕಾರ್ಮಿಕರು ತಮ್ಮ ಕುಟುಂಬನಿರ್ವಹಣೆಗೆ ಕಷ್ಟ ಪಡುವಂತೆ ಮಾಡಿದೆ.ದುಡಿಮೆ ಇಲ್ಲದೇ ಹಸಿವಿನಿಂದಬಳಲುತ್ತಿರುವ ಕುಟುಂಬಗಳಿಗೆ ರಾಜ್ಯಸರಕಾರ ಕೂಡಲೇ ಉಚಿತವಾಗಿ ದಿನಸಿಹಾಗೂ ಆರ್ಥಿಕ ಸಹಾಯ ನೀಡಬೇಕುಎಂದು ಆಗ್ರಹಿಸಿದರು.

ವ್ಯಾಕ್ಸಿನ್‌ ವಿತರಣೆ ಹೆಚ್ಚಿಸಿ ಎಲ್ಲರಿಗೂಈ ಕೂಡಲೇ ಉಚಿತವಾಗಿ ನೀಡಬೇಕು.ಕೂಡಲೇ ಕೋವಿಡ್‌ ಪರಿಸ್ಥಿತಿಯನ್ನುಸಮರ್ಥವಾಗಿ ಎದುರಿಸಲುಆಸ್ಪತ್ರೆಗಳಲ್ಲಿ ಸಮರೋಪಾದಿಯಲ್ಲಿಮೂಲ ಸೌಲಭ್ಯ ಕಲ್ಪಿಸಬೇಕು.ಆಮ್ಲಜನಕ ವ್ಯವಸ್ಥೆ ಮಾಡಬೇಕು.ಕರ್ಫ್ಯೂ ಲಾಕ್‌ಡೌನ್‌ ಅವ ಧಿಯಲ್ಲಿಎಲ್ಲ ಕಾರ್ಮಿಕರಿಗೆ ಸಂಪೂರ್ಣ ವೇತನನೀಡಿಕೆ ಖಚಿತಪಡಿಸಿ ಆದೇಶಿಸಬೇಕು.

ಕೆಲಸದಿಂದ ವಜಾ, ವೇತನ ಕಡಿತದವಿರುದ್ಧ ಆಡಳಿತ ವರ್ಗದ ಮೇಲೆಕ್ರಮ ಕೈಗೊಳ್ಳಬೇಕು ಹಾಗೂ ಕೋವಿಡ್‌ಮುಂಚೂಣಿ ಯೋಧರಾದ ಆಶಾ,ಅಂಗನವಾಡಿ ಕಾರ್ಯಕರ್ತೆಯರಿಗೆಹೆಚ್ಚುವರಿ ಸಂಭಾವನೆ ನೀಡಬೇಕುಎಂದು ಗೂಗಲ್‌ ಮೀಟ್‌ ಸಭೆಯಲ್ಲಿಆಗ್ರಹಿಸಿಸಲಾಯಿತು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿಸುನೀಲ ಸಿದ್ರಾಮಶೆಟ್ಟಿ ಪ್ರಾಸ್ತಾವಿಕವಾಗಿಮಾತನಾಡಿದರು.

ಗೂಗಲ್‌ ಮೀಟ್‌ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾರ್ಮಿಕಸಂಘಟನೆಗಳಾದ ಅಂಗನವಾಡಿ,ಆಶಾ, ಬಿಸಿಯೂಟ ವಸತಿ ನಿಲಯಕಾರ್ಮಿಕರು, ಆಲಮಟ್ಟಿ ಗಾರ್ಡನ್‌,ಆಲಮಟ್ಟಿ ಡ್ಯಾಮಟ್ಯಾಪ್‌ ಮತ್ತುಗ್ಯಾಲರಿ, ಬಹುಹಳ್ಳಿ, ಕಾರ್ಮಿಕರುಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next