ವಾಷಿಂಗ್ಟನ್: ದೈನಂದಿನ ಟ್ವೀಟ್ ಗಳ ಓದುವಿಕೆಯ ಮಿತಿಗೆ ತಾತ್ಕಾಲಿಕ ಮಿತಿ ಹೇರುವುದಾಗಿ ಟ್ವೀಟರ್ ಮುಖ್ಯಸ್ಥ ಎಲಾನ್ ಮಸ್ಕ್ ಘೋಷಿಸಿದ ಬೆನ್ನಲ್ಲೇ ಟ್ವೀಟರ್ ಮಾದರಿಯ ಮೈಕ್ರೋಬ್ಲಾಗಿಂಗ್ App Threads ಅನ್ನು ಪರಿಚಯಿಸುವುದಾಗಿ ಮೆಟಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:Crime: ಭೇಟಿಗೆ ಕರೆದು ಪ್ರಿಯಕರನ ಲೂಟಿ; ರಸ್ತೆಯಲ್ಲೇ ಬೆತ್ತೆಲೆ ಮಾಡಿ ಪರಾರಿಯಾದ ಪ್ರಿಯತಮೆ
ಎಲಾನ್ ಮಸ್ಕ್ ಒಡೆತನದ ಟ್ವೀಟರ್ ಗೆ ಸಡ್ಡು ಹೊಡೆದಿರುವ ಮೆಟಾ ಬಿಡುಗಡೆ ಮಾಡಲಿರುವ ಹೊಸ Appಗೆ ಥ್ರೆಡ್ಸ್ (Threads) ಎಂದು ಹೆಸರಿಟ್ಟಿದೆ. ಈ ಹೊಸ App ಜುಲೈ 6ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.
ಥ್ರೆಡ್ಸ್ ಬಳಕೆದಾರರಿಗೆ ತಮ್ಮ ಖಾತೆಯ ಮೂಲಕ ಫಾಲೋ ಮಾಡುವ ಅವಕಾಶವಿದೆ. Instagramನದ್ದೇ ಯೂಸರ್ ನೇಮ್ ಇಟ್ಟುಕೊಳ್ಳಬಹುದಾಗಿದೆ. Apple’s App ಸ್ಟೋರ್ ನಲ್ಲಿ ಲಿಸ್ಟಿಂಗ್ ಮಾಡಲಾಗಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.
Apples App ಸ್ಟೋರ್ ನಂತೆ ಗೂಗಲ್ ಪ್ಲೇ ಸ್ಟೋರ್ ನಲ್ಲಿಯೂ ಥ್ರೆಡ್ಸ್ ಅನ್ನು ಬಿಡುಗಡೆ ಮಾಡುತ್ತೀರಾ ಎಂಬ ರಾಯಟರ್ಸ್ ಪ್ರಶ್ನೆಗೆ ಮೆಟಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ವಿವರಿಸಿದೆ.