Advertisement

ದೇವರು ಬಂದ ಹಾಗೆ…

12:56 PM May 29, 2018 | Team Udayavani |

ಬಾದಾಮಿಯಿಂದ ಬನಶಂಕರಿ ಮಾರ್ಗವಾಗಿ 13 ಕಿ.ಮೀ ಕ್ರಮಿಸಿದರೆ ಶಿವಯೋಗಿ ಮಂದಿರ ಸಿಗುತ್ತದೆ. ನಾನು ಒಮ್ಮೆ ಬಾದಾಮಿಯ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು, ನಂತರ ಶಿವಯೋಗಿ ಮಂದಿರದತ್ತ ಹೋಗಿದ್ದೆ. ಅಲ್ಲಿರುವ ಹಾನಗಲ್‌ ಶಿವಕುಮಾರ ಶಿವಯೋಗಿಗಳ ಗದ್ದುಗೆಗೆ ನಮಸ್ಕರಿಸಿ, ಅವರ ಜೀವನ ಚರಿತ್ರೆಯ ಕುರಿತು ಅಪರೂಪದ ಚಿತ್ರಗಳನ್ನು ನೋಡುತ್ತ, ಓದುತ್ತ ಸಮಯದ ಅರಿವಿಲ್ಲದೆ ಮೈಮರೆತಿದ್ದೆ.
ಎಷ್ಟೋ ಹೊತ್ತಿನ ನಂತರ, ಊರಿಗೆ ಮರಳಿ ಹೋಗಲು ತಡವಾಗುತ್ತದೆ ಎಂಬುದು ನೆನಪಾಯ್ತು.

Advertisement

ಗಡಿಬಿಡಿಯಿಂದಲೇ ಹೊರಡಲು ಸಿದ್ಧನಾದೆ. ಆದರೆ, ಅದಾಗಲೇ ಊಟದ ಸಮಯವಾಗಿದ್ದರಿಂದ ಅಲ್ಲಿದ್ದ ವ್ಯವಸ್ಥಾಪಕರು, ಒಳಗಡೆ ಯಾರೂ ಇಲ್ಲವೆಂದು ಭಾವಿಸಿ ಗಡಿಬಿಡಿಯಲ್ಲಿ ಸ್ಮಾರಕ ಭವನದ ಬಾಗಿಲಿಗೆ ಬೀಗ ಹಾಕಿ ಊಟಕ್ಕೆ ಹೊರಟುಹೋಗಿದ್ದರು. ನಾನು ಒಳಗಿಂದ ಬಾಗಿಲನ್ನು ಬಡಿದೆ, ಕೂಗಿದೆ, ಅರಚಿದೆ. ಯಾರೊಬ್ಬರ ಸುಳಿವೂ ಇಲ್ಲ. ಅÇÉೇ ಇದ್ದ ವ್ಯವಸ್ಥಾಪಕರ ಫೋನ್‌ ನಂಬರ್‌ಗೆ ಕರೆ ಮಾಡೋಣವೆಂದರೆ, ನೆಟ್‌ವರ್ಕ್‌ ಕೂಡ ಇಲ್ಲ. ಮೊದಲೇ ಬೇಸಿಗೆ. ಬಾಯಾರಿಕೆಯ ಜೊತೆಗೆ ಸ್ವಲ್ಪ ಭಯವೂ ಆಯ್ತು. ಕುಡಿಯೋಣವೆಂದರೆ ಹನಿ ನೀರೂ ಇಲ್ಲ. ಹೊಟ್ಟೆ ಬೇರೆ ಚುರುಗುಟ್ಟಲು ಶುರುವಾಯಿತು. ಕಾದು ಕಾದು ಸುಸ್ತಾಗಿ ಅಲ್ಲಿಯೇ ಕುಸಿದು ಕುಳಿತು ಬಿಟ್ಟೆ.
ಸಂಜೆಯ ಹೊತ್ತಾದರೂ ಯಾರೂ ಅತ್ತ ಸುಳಿಯದಿ¨ªಾಗ, ಪ್ರಯಾಸ ಪಟ್ಟು ಕೊನೆಗೆ ಕಿಟಕಿಯನ್ನೇರಿ ಇಣುಕಿದೆ.

ಅÇÉೊಬ್ಬ ಬಿಳಿ ಪಂಚೆಯನ್ನುಟ್ಟ, ಹಣೆಗೆ ವಿಭೂತಿ ಬಳಿದ, ಕೆಂಪು ವಸ್ತ್ರ ಹೊದ್ದಿದ್ದ ಬಾಲಕ ಕಂಡ. ಕೂಡಲೇ ಅವನನ್ನು ಕೂಗಿ, ಬಾಗಿಲು ತೆರೆಯುವುದಕ್ಕೆ ಸಹಾಯ ಮಾಡುವಂತೆ ಕೋರಿದೆ. ಕೂಡಲೇ ಓಡಿ ಹೋದ ಬಾಲಕ ಕೀ ತಂದು ಬೀಗ ತೆರೆದು, ಸಂಸ್ಕೃತ ಪಾಠಕ್ಕೆ  ತಡವಾಗುತ್ತದೆ ಎಂದು ಓಡಿಹೋಗಿಬಿಟ್ಟ. ಅವನ ಹೆಸರನ್ನೂ ನಾನು ಕೇಳಲಾಗಲಿಲ್ಲ. ಊರಿಗೆ ತೆರಳಲು ತಡವಾಗುತ್ತದೆ ಎಂದು ಹೆಚ್ಚು ತಡ ಮಾಡದೆ ಅಲ್ಲಿಂದ ನಿರ್ಗಮಿಸಿದೆ. 

ಪ್ರತಿ ಬಾರಿ ಶಿವಯೋಗ ಮಂದಿರಕ್ಕೆ ಹೋದಾಗಲೆಲ್ಲ ಆ ಘಟನೆ ಮತ್ತು ಆ ಹುಡುಗ ನೆನಪಾಗುತ್ತಾನೆ. ಆ ಬಾಲಕ ಮುಂದೆಂದೂ ನನಗೆ ಅಲ್ಲಿ ಕಾಣಿಸಲಿಲ್ಲ. ನಡೆದಿದ್ದನ್ನೆಲ್ಲ ನೆನಪು ಮಾಡಿಕೊಂಡಾಗ ಬಾಲಕನ ವೇಷದಲ್ಲಿ ಶಿವಕುಮಾರ ಶಿವಯೋಗಿಗಳೇ ಬಂದು ಬಾಗಿಲನ್ನು ತೆರೆದರೇನೋ ಎಂಬ ಭಾವನೆ ಮೂಡುತ್ತದೆ!

-ಪ್ರಶಾಂತ್‌ ಶಂಕ್ರಪ್ಪ ಮೇಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next