ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಸೇವೆ ಮೂಲಕ ನಡೆಯುತ್ತಿರುವ ರಫ್ತು ವ್ಯವಹಾರ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುವ ಹೊತ್ತಿನಲ್ಲೇ ವಿಮಾನಗಳ ಕೊರತೆಯ ಸಮಸ್ಯೆ ಉದ್ಭವಿಸಿದೆ.
ಈ ನಿಲ್ದಾಣದಿಂದ 2013ರಲ್ಲಿ ಕಾರ್ಗೋ ಸೇವೆ ಆರಂಭವಾಗಿತ್ತು. ಆ ಆರ್ಥಿಕ ವರ್ಷದಲ್ಲಿ 116.62 ಟನ್ ರಫ್ತು ಕೈಗೊಳ್ಳಲಾಗಿತ್ತು. 2018-19 ರಲ್ಲಿ ಅದು 3,077.89 ಟನ್‌ಗೆàರಿತು. ಆರೇ ವರ್ಷಗಳಲ್ಲಿ 25ಕ್ಕೂ ಹೆಚ್ಚು ಪಟ್ಟು ಹೆಚ್ಚಳವಾಗಿತ್ತು. ಒಟ್ಟಾರೆ ಆಯಾತ-ನಿರ್ಯಾತ 132.79 ಟನ್ ಗಳಿಂದ 3,159.08 ಟನ್‌ವರೆಗೆ ಏರಿತ್ತು. ಕಳೆದ ಡಿಸೆಂಬರ್‌ನಿಂದ ವಿಮಾನ ಗಳ ಹಾರಾಟ ಕಡಿಮೆ ಯಾದರೂ ರಫ್ತು ವ್ಯವಹಾರಕ್ಕೆ ಹೆಚ್ಚು ಹೊಡೆತ ಬಿದ್ದಿಲ್ಲ.
ಇಲ್ಲಿಂದ ಕೊಲ್ಲಿ ದೇಶಗಳಿಗೆ ಶುಕ್ರವಾರ, ರವಿವಾರ 5, ಸೋಮ ವಾರ, ಬುಧವಾರ, ಗುರುವಾರ 4, ಮಂಗಳವಾರ ಮತ್ತು ಶನಿವಾರ 3 ವಿಮಾನಗಳು ಸಂಚರಿಸುತ್ತವೆ. ಇದ ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬಾೖ, ದೋಹಾ, ದಮಾಮ್, ಬಹ್ರೈನ್, ಮಸ್ಕತ್, ಅಬುಧಾಬಿಗಳಿಗೆ ತೆರಳಿದರೆ, ಸ್ಪೈಸ್ ಜೆಟ್ ದುಬಾೖಗಷ್ಟೇ ಪ್ರಯಾಣಿಸುತ್ತದೆ. ಇವುಗಳಲ್ಲಿ ವಿವಿಧ ಉತ್ಪನ್ನಗಳನ್ನು ಕಳಿಸಲಾಗುತ್ತಿದೆ..
ಇಂಡಿಗೋ ಗಲ್ಫ್ಗೂ ಯಾನ ಕೈಗೊಂಡರೆ ಹಾಗೂ ಸ್ಪೆ çಸ್ ಜೆಟ್ ಸಂಸ್ಥೆ ದುಬಾೖ ಜತೆಗೆ ಇತರ ಗಲ್ಫ್ ದೇಶಗಳಿಗೂ ಯಾನ ಆರಂಭಿಸಿದರೆ ರಫ್ತು ವ್ಯವಹಾರಕ್ಕೆ ಕೊಂಚ ಅನುಕೂಲವಾಗಬಹುದು ಎನ್ನುತ್ತಾರೆ ಉದ್ಯಮ ಪರಿಣತರು.
ಸ್ಥಳೀಯ ರಫ್ತು ಏಜೆನ್ಸಿಗಳು ಇಲ್ಲಿನ ಕೃಷಿಕರನ್ನು ತರಕಾರಿ ಬೆಳೆಯಲು ಪ್ರೋತ್ಸಾಹಿಸಬೇಕು. ಇಲ್ಲಿನ ತರಕಾರಿ ಮತ್ತು ಇತರ ಉತ್ಪನ್ನಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ ಇದೆ. ಈಗಾಗಲೇ ಏರ್ ಏಶ್ಯಾದಂತಹ ವಿಮಾನ ಸಂಸ್ಥೆಗಳು ಗಲ್ಫ್ ದೇಶಗಳಿಗೆ ವಿಮಾನ ಯಾನ ಆರಂಭಿಸಲು ಆಸಕ್ತಿ ವಹಿಸಿವೆ. ಹೆಚ್ಚು ವಿಮಾನಗಳು ಸಂಚರಿಸಿದರೆ ರಫೂ¤ ಹೆಚ್ಚೀತು.
– ಕೆ.ಎ. ಶ್ರೀನಿವಾಸನ್, ಮ್ಯಾನೇಜರ್, ಕಾರ್ಗೊ ವಿಭಾಗ, ಮಂಗಳೂರು ವಿ. ನಿಲ್ದಾಣ